ಗಂಗೊಳ್ಳಿ ಚರ್ಚಿನಲ್ಲಿ ಶೃದ್ಧಾ ಭಕ್ತಿಯಿಂದ ಗುಡ್‌ ಫ್ರೈಡೆ ಆಚರಣೆ

Spread the love

ಗಂಗೊಳ್ಳಿ ಚರ್ಚಿನಲ್ಲಿ ಶೃದ್ಧಾ ಭಕ್ತಿಯಿಂದ ಗುಡ್‌ ಫ್ರೈಡೆ ಆಚರಣೆ

ಕುಂದಾಪುರ: ಗಂಗೊಳ್ಳಿ ಕೊಸೆಸಾಂವ್‌ ಅಮ್ಮನವರ ಚರ್ಚಿನಲ್ಲಿ ಧರ್ಮಗುರು ವಂ|ತೋಮಸ್‌ ರೋಶನ್‌ ಡಿʼಸೋಜಾ ಅವರ ನೇತೃತ್ವದಲ್ಲಿ ಗುಡ್‌ ಫ್ರೈಡೆ ಆಚರಣೆ ಶೃದ್ಧಾ ಭಕ್ತಿಯಿಂದ ಜರುಗಿತು.

ಚರ್ಚಿನ ಕಾರ್ಮೇಲ್‌ ಕಾನ್ವೆಂಟ್‌ ಧರ್ಮಭಗಿನಿಯರಿಂದ ಶಿಲುಬೆಯ ಹಾದಿ ಜರುಗಿದ್ದು ಯೇಶುವಿನ ಕಷ್ಟಗಳನ್ನು ನೆನೆಯಲಾಯಿತು

ಸುಮಾರು 100 ವರ್ಷಗಳಿಂದ ನಡೆದು ಬಂದಿರುವ ಯೇಸುವಿನ ನಿರ್ಜೀವ ದೇಹದ ಮೂರ್ತಿ ಹಾಗೂ ಶೋಕ ಮಾತೆಯ ಪುತ್ಥಳಿಯ ಮೆರವಣಿಗೆ ನಡೆಯಿತು

ಬಳಿಕ ಧರ್ಮಗುರು ವಂ|ತೋಮಸ್‌ ಅವರು ಮೇರಿ ಮಾತೆಯ ಏಳು ನೋವುಗಳ ಕುರಿತು ಪ್ರವಚನದ ಮೂಲಕ ವಿವರಿಸಿದರು.

ಶುಭ ಶುಕ್ರವಾರದ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಗಂಗೋಳ್ಳಿ ಮಾತ್ರವಲ್ಲದೆ ಸ್ಥಳೀಯ ಇತರ ಚರ್ಚುಗಳ ಭಕ್ತಾದಿಗಳು ಕೂಡ ಭಾಗವಹಿಸಿದರು.


Spread the love

1 Comment

Comments are closed.