Home Mangalorean News Kannada News ಗಣ್ಯರ ಸಂಚಾರ ಹಿನ್ನೆಲೆ: ಬದಲಿ ಮಾರ್ಗಗಳನ್ನು ಉಪಯೋಗಿಸುವಂತೆ   ಪೊಲೀಸ್ ಇಲಾಖೆ ಮನವಿ

ಗಣ್ಯರ ಸಂಚಾರ ಹಿನ್ನೆಲೆ: ಬದಲಿ ಮಾರ್ಗಗಳನ್ನು ಉಪಯೋಗಿಸುವಂತೆ   ಪೊಲೀಸ್ ಇಲಾಖೆ ಮನವಿ

Spread the love

ಗಣ್ಯರ ಸಂಚಾರ ಹಿನ್ನೆಲೆ: ಬದಲಿ ಮಾರ್ಗಗಳನ್ನು ಉಪಯೋಗಿಸುವಂತೆ   ಪೊಲೀಸ್ ಇಲಾಖೆ ಮನವಿ

ಮಂಗಳೂರು: ದಿನಾಂಕ 10-01-2026 ರಂದು ಸಂಜೆ ಮಂಗಳೂರು ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ನಡೆಯಲಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಾಮ ಸಮಾವೇಶ, ಪಿಲಿಕುಲದಲ್ಲಿ ನಡೆಯುವ ಉದ್ಘಾಟನಾ ಸಮಾರಂಭ, ಹಾಗೂ ನರಿಂಗಾನ ಮತ್ತು ಅಂಬ್ಲಮೊಗರು ಪ್ರದೇಶಗಳಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಗಣ್ಯರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ಗಣ್ಯರು ಸಂಚರಿಸುವ ಮಾರ್ಗಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಸುಗಮ ಸಂಚಾರದ ಹಿತದೃಷ್ಟಿಯಿಂದ ಸಾರ್ವಜನಿಕರು ತುರ್ತು ಸಂದರ್ಭ ಹೊರತುಪಡಿಸಿ ಕೆಳಕಂಡ ಮಾರ್ಗಗಳನ್ನು ಬಳಕೆ ಮಾಡದೆ ಬದಲಿ ಮಾರ್ಗಗಳನ್ನು ಉಪಯೋಗಿಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿರುವ ಮಾರ್ಗಗಳು:

ಕೆಂಜಾರು ಜಂಕ್ಷನ್ – ಮರವೂರು – ಕಾವೂರು – ಬೋಂದೆಲ್ – ಪದವಿನಂಗಡಿ – ಮೇರಿಹಿಲ್ – ಯೆಯ್ಯಾಡಿ – ಕೆ.ಪಿ.ಟಿ. ವೃತ್ತ – ಬಟ್ಟಗುಡ್ಡೆ – ಕದ್ರಿ ಕಂಬಳ – ಭಾರತ್ ಬೀಡಿ ಜಂಕ್ಷನ್ – ಬಂಟ್ಸ್ ಹಾಸ್ಟೆಲ್ – ಪಿ.ವಿ.ಎಸ್ – ನವಭಾರತ್ ವೃತ್ತ – ಡಾ. ಅಂಬೇಡ್ಕರ್ ಜಂಕ್ಷನ್ – ಹಂಪನ್ ಕಟ್ಟೆ – ಕೈರಾಲಿ ಜಂಕ್ಷನ್ – ಅತ್ತಾವರ ಕಟ್ಟೆ – ಅವತಾರ್ ಹೋಟೆಲ್ ಎದುರಿನ ರಸ್ತೆ

ಪದವು ಜಂಕ್ಷನ್ – ನಂತೂರು ವೃತ್ತ – ಪಂಪುವೆಲ್ – ಎಕ್ಕೂರು – ಜಪ್ಪಿನಮೊಗರು – ಕಲ್ಲಾಪು – ತೊಕ್ಕೊಟ್ಟು – ಕುತ್ತಾರ್ಪದವು – ದೇರಳಕಟ್ಟೆ – ನಾಟೆಕಲ್ – ಮಂಗಳಾಂತಿ – ಕಲ್ಕಟ – ಮಂಜನಾಡಿ – ನರಿಂಗಾನ

ಕುತ್ತಾರ್ಪದವು – ಕೊರಗಜ್ಜನಕಟ್ಟೆ – ಉಳಿಯ – ಅಂಬ್ಲಮೊಗರು – ಮದಕ ಜಂಕ್ಷನ್

ಕೆ.ಪಿ.ಟಿ. ಜಂಕ್ಷನ್ – ಕೊಟ್ಟಾರಚೌಕಿ – ಕೊಡಿಕಲ್ ಕ್ರಾಸ್ – ಕೂಳೂರು – ಕೆ.ಐ.ಓ.ಸಿ.ಎಲ್ ಜಂಕ್ಷನ್ – ತಣ್ಣೀರುಬಾವಿ – ಬ್ಲೂ ಫ್ಲ್ಯಾಗ್ ಬೀಚ್

ಪ್ರಮುಖ ಸೂಚನೆಗಳು:

ಮೇಲ್ಕಂಡ ಮಾರ್ಗಗಳ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧ.

ಗಣ್ಯರು ಸಂಚರಿಸುವ ರಸ್ತೆಗಳ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧ.

ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಸಂಚರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.


Spread the love

Exit mobile version