Home Mangalorean News Kannada News ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಉಳ್ಳಾಲ ಪೋಲಿಸರು

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಉಳ್ಳಾಲ ಪೋಲಿಸರು

Spread the love

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಉಳ್ಳಾಲ ಪೋಲಿಸರು

ಮಂಗಳೂರು: ಸಾರ್ವಜನಿಕರಿಗೆ ನಿಷೇದಿತ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಉಪ್ಪಳ ಕಾಸರಗೋಡು ನಿವಾಸಿ ಅಬೂಬಕ್ಕರ್ ಸಿದ್ದಿಕ್ (32) ಎಂದು ಗುರುತಿಸಲಾಗಿದೆ.

ಮೇ 31 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ಮೋಟಾರು ಸೈಕಲ್ ಕೆಎಲ್-14-ಹೆಚ್-4301 ನೇಯದರಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ವಶದಲ್ಲಿ ಹೊಂದಿ ಸಾಗಾಟ ಮಾಡುತ್ತಿದ್ದ ಅಬೂಬಕ್ಕರ್ ಸಿದ್ದಿಕ್ ನನ್ನು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್ ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ವಿನಾಯಕ ತೋರಗಲ್‌, ಗುರಪ್ಪ ಕಾಂತಿ, ರವರುಗಳು ಧಾಳಿ ಮಾಡಿ ಆರೋಪಿಯನ್ನು ಪತ್ತೆ ಮಾಡಿ ಆರೋಪಿಯ ವಶದಲ್ಲಿದ್ದ 1 ಕೆಜಿ 50 ಗ್ರಾಂ ತೂಕದ ಗಾಂಜಾವನ್ನು ಮತ್ತು ಕೆಎಲ್-14-ಹೆಚ್-4301 ನೇ ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ರೂ.20,500/- ಆಗಿರುತ್ತದೆ. ಆರೋಪಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಸುಲಭ ರೂಪದಲ್ಲಿ ಸಿಗುವಂತೆ ಮಾರಾಟ ಮಾಡುವ ದಂಧೆಯನ್ನು ನಡೆಸುವವನಾಗಿದ್ದು, ಆರೋಪಿ ಕೇರಳ ರಾಜ್ಯದ ಮೂಲದ ವ್ಯಕ್ತಿಯಾಗಿರುತ್ತಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಮೊ.ನಂ. 148/2018 ಕಲಂ 8(ಸಿ), 20(ಬಿ) ಎನ್‌ಡಿಪಿಎಸ್‌ ಕಾಯಿದೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕಾರ್ಯಚಾರಣೆಯಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಪ್ರಭಾರ ಎ.ಸಿ.ಪಿ. ಶ್ರೀ ಗೋಪಾಲಕೃಷ್ಣ ಟಿ. ನಾಯ್ಕ್‌ ರವರ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಸೊತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲಿಸ್ ನಿರೀಕ್ಷಕರಾದ ಕೆ.ಆರ್.ಗೋಪಿಕೃಷ್ಣ, ಪೊಲೀಸ್ ಉಪ-ನಿರೀಕ್ಷಕರಾದ ವಿನಾಯಕ ತೋರಗಲ್‌, ಮತ್ತು ಎಎಸ್‌ಐ ರಾಧಾಕೃಷ್ಣ, ಮೋಹನ್.ಕೆ.ವಿ. ಸಿಹೆಚ್‌ಸಿ ಗಳಾದ ರಾಜಾರಾಮ, ಶರೀಫ್, ಸಿಪಿಸಿ 386 ರಂಜಿತ್‌, ಸಿಪಿಸಿ 559 ಬಸವರಾಜ ಚಿಂಚೋಳಿ, ಸಿಪಿಸಿ 557 ಸೋಮಶೇಖರ, ಸಿಪಿಸಿ 2424 ವಾಸುದೇವರವರು ಸಹಕರಿಸಿರುತ್ತಾರೆ.


Spread the love

Exit mobile version