Home Mangalorean News Kannada News ಗಾಂಧಿಜಿಗೆ ಅವಮಾನಿಸಿದ ಅನಂತ್ ಹೆಗಡೆಗೆ ಮಾನಸಿಕ ವೈದ್ಯರಲ್ಲಿ ಚಿಕಿತ್ಸೆ ನೀಡಿ – ಮಾಜಿ ಸಂಸದ ಉಗ್ರಪ್ಪ

ಗಾಂಧಿಜಿಗೆ ಅವಮಾನಿಸಿದ ಅನಂತ್ ಹೆಗಡೆಗೆ ಮಾನಸಿಕ ವೈದ್ಯರಲ್ಲಿ ಚಿಕಿತ್ಸೆ ನೀಡಿ – ಮಾಜಿ ಸಂಸದ ಉಗ್ರಪ್ಪ

Spread the love

ಗಾಂಧಿಜಿಗೆ ಅವಮಾನಿಸಿದ ಅನಂತ್ ಹೆಗಡೆಗೆ ಮಾನಸಿಕ ವೈದ್ಯರಲ್ಲಿ ಚಿಕಿತ್ಸೆ ನೀಡಿ – ಮಾಜಿ ಸಂಸದ ಉಗ್ರಪ್ಪ

ಉಡುಪಿ: ಸಂಸದ ಅನಂತ್ ಕುಮಾರ್ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದು, ಬಿಜೆಪಿಗೆ ಮಾನ ಮರ್ಯಾದೆ ಇದ್ರೆ ಅನಂತ್ ಕುಮಾರ್ ಹೆಗ್ಡೆಯನ್ನು ಟ್ರೀಟ್ ಮೆಂಟ್ ಕೊಡಿಸಿ ಮತ್ತು ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿ ಎಂದು ಕಾಂಗ್ರೆಸ್ ನಾಯಕ ಮಾಜಿ ಸಂಸದ ಉಗ್ರಪ್ಪ ಹೇಳಿದರು.

ಅವರು ಗುರುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಇದು ಕೇವಲ ಅನಂತ್ ಕುಮಾರ್ ಹೆಗಡೆ ಧ್ವನಿ ಅಲ್ಲ ಬದಲಾಗಿ ಇದು ಬಿಜೆಪಿ ಮೈಂಡ್ ಸೆಟ್. ಬಿಜೆಪಿಯೇ ಎಚ್ಚರಿಸಿದರೂ ಹೆಗಡೆ ಕ್ಷಮೆ ಕೇಳಿಲ್ಲ. ದೇಶದ ಪರಂಪರೆ ಬಗ್ಗೆ, ಗಾಂಧೀಜಿ, ಅಂಬೇಡ್ಕರ್ ಬಗ್ಗೆ ಗೌರವ ಇಲ್ಲವೇ ಎಂದು ಪ್ರಶ್ನಿಸಿದ ಹೆಗಡೆ ಗಾಂಧಿಜಿಯ ಮೇಲೆ ಗೌರವ ಇದ್ರೆ ಹೆಗಡೆ ಮೇಲೆ ಶಿಸ್ಯಕ್ರಮ ಕೈಗೊಳ್ಳಬೇಕು ಮತ್ತು ಅನಂತ್ ಕುಮಾರ್ ಹೆಗ್ಡೆ ಸದಸ್ಯತ್ವ ರದ್ದು ಮಾಡಬೇಕು. ರಾಷ್ಟ್ರಪತಿ, ಸ್ಪೀಕರ್, ಪ್ರಧಾನಿ ಗಳು ಹೆಗಡೆ ಹೇಳಿಕೆಯನ್ನು ಗಂಭೀರವಾಗಿ ಗಮನಿಸಬೇಕು ಮತ್ತು ಅವರನ್ನು ಸಂಸದ ಸ್ಥಾನದಿಂದ ಅಮಾನತುಗೊಳಿಸಬೇಕು ಮತ್ತು ಅವರ ಮೇಲೆ ಸಂವಿಧಾನ ವಿರೋಧಿ ನಡೆಗಾಗಿ ಕೇಸು ದಾಖಲಿಸಬೇಕು ಎಂದರು.

ರಾಜ್ಯ ಮಂತ್ರಿ ಮಂಡಲ ವಿಸ್ತರಣೆ ವಿಚಾರದ ಕುರಿತು ಮಾತನಾಡಿದ ಉಗ್ರಪ್ಪ ರಾಜ್ಯದ ಇತಿಹಾಸ ದಲ್ಲಿ ಇವತ್ತು ಕರಾಳ ದಿನವಾಗಿದೆ. ಜನಾದೇಶಕ್ಕೆ ದ್ರೋಹ ಮಾಡಿದವರು, ಪ್ರಜಾಪ್ರಭುತ್ವ ಕ್ಕೆ ದ್ರೋಹ ಮಾಡಿದವರು,ರಾಜಕೀಯ ಜನ್ಮಕೊಟ್ಟವರಿಗೆ ದ್ರೋಹ ಮಾಡಿದವರು, ಬಿಜೆಪಿ ವ್ಯಾಪಾರ ಮಾಡಿಕೊಂಡ ವರು , ವಾಮಮಾರ್ಗದಲ್ಲಿ ಆಯ್ಕೆಯಾದ ಹತ್ತು ಶಾಸಕರನ್ನ ಮಂತ್ರಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ದ ಅಣಕ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಮಂತ್ರಿಗಳಾದವರು, ಇನ್ನೂ ದರೂ ಮತದಾರರಿಗೆ ಪಕ್ಷಕ್ಕೆ ನಿಷ್ಟರಾಗಿರಿ ಎಂದು ನೂತನ ಸಚಿವರಿಗೆ ಉಗ್ರಪ್ಪ ಕಿವಿಮಾತು ಹೇಳಿದರು.

ಹಣದಹೊಳೆ, ಅಧಿಕಾರ ದುರ್ಬಳಕೆ ಮಾಡಿ ಇವರು ಗೆದ್ದದ್ದು ಎಲ್ಲರಿಗೂ ಗೊತ್ತಿದೆ ಸೋತರೆ ರಾಜಕೀಯ ಯಾವುದೇ ಪಾರ್ಟಿ ನಿರ್ನಾಮ ಆಗೋದಿಲ್ಲ ನಿಮಗೂ ಗೊತ್ತಿರಲಿ. ನಿಮ್ಮ ದಾಸ್ಯ ಪ್ರವೃತ್ತಿ ಪ್ರಮಾಣವಚನ ವೇಳೆ ಬಯಲಾಗಿದೆಇನ್ನಾದರೂ ದಾಸ್ಯದ ಪ್ರವೃತ್ತಿ ಬಿಡುವಂತೆ ಆಗ್ರಹಿಸಿದ ಅವರು ನೂತನ ಸಂಪುಟ ಸಚಿವರು ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸುವುದರೊಂದಿಗೆ ರಾಜ್ಯದ ಹಿತ ಕಾಪಾಡಲು ಕೇಂದ್ರದಿಂದ ಅನುದಾನ ತನ್ನಿ ಎಂದರು.


Spread the love

Exit mobile version