Home Mangalorean News Kannada News ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ) ಫೇಸ್‍ಬುಕ್ ಗ್ರೂಪ್ ತಂಡದ ವತಿಯಿಂದಗಾಣಿಗ ಸಂಗಮ – 2018

ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ) ಫೇಸ್‍ಬುಕ್ ಗ್ರೂಪ್ ತಂಡದ ವತಿಯಿಂದಗಾಣಿಗ ಸಂಗಮ – 2018

Spread the love

ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ) ಫೇಸ್‍ಬುಕ್ ಗ್ರೂಪ್ ತಂಡದ ವತಿಯಿಂದಗಾಣಿಗ ಸಂಗಮ – 2018

ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ) ಫೇಸ್‍ಬುಕ್ ಗ್ರೂಪ್ ತಂಡದ ವತಿಯಿಂದ ದಿ. ನಾಗೇಶ್ ಗಾಣಿಗ ವೇದಿಕೆಯಲ್ಲಿ 3 ನೇ ವರ್ಷದ “ಗಾಣಿಗ ಸಂಗಮ – 2018” ಪುರಭವನದಲ್ಲಿ ಈ ಕಾರ್ಯಕ್ರಮವನ್ನು ಹರ್ಷ ಫೈನಾನ್ಸ್‍ನ ಪ್ರೋಪೈಟರ್ ಆದಂತಹ ಹರೀಶ್ ಕುತ್ತಾರ್‍ರವರು ಉದ್ಘಾಟಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಮಾದವ ಮಾವೆ ವಹಿಸಿದ್ದರು. ಇದೇ ಸಂಧರ್ಭದಲ್ಲಿ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ್ದರು. ಪ್ರತಿ ವರ್ಷ ನೃತ್ಯ ಸ್ಪರ್ದೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಗಾಣಿಗ ಸಮೂದಾಯವನ್ನು ಒಗ್ಗೂಡಿಸುವ ಸಮೂದಾಯದ ಜಿ.ವೈ.ಎಸ್.ಪಿ ತಂಡದ ಯುವಕರ ಸಾಧನೆ ಶಾಘ್ಲನೀಯ ಸಮೂದಾಯ ಯಾವುದೇ ವ್ಯಕ್ತಿ ಸಾಧನೆ ಮಾಡಿದರು ಅವರನ್ನು ಪ್ರೋತ್ಸಾಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದ್ದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ದ.ಕ ಬಿ.ಜೆ.ಪಿ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಯುವ ಸಂಘಟನಾ ಶಕ್ತಿಯಾಗಿರುವಂತಹ ಚತುರ ಯುವ ನಾಯಕ ಹರೀಶ್ ಪೂಂಜಾ ರವರು ನೆರೆದಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.

ಅನಾದಿ ಕಾಲದಿಂದಲೂ ಇದುವರೆಗೂ ಸಮಾಜವನ್ನು ಹೇಗೆ ಬೆಳಗಿಸಬೇಕೆಂದು ಕೇಳಿದರೆ, ಒಂದು ದೀಪ ಸಮಾಜಕ್ಕೆ ಬೆಳಕನ್ನು ನೀಡಬೇಕೆಂದರೆ ಆದಕ್ಕೆ ಗಾಣಿಗರು ಬೇಕು ಎಂದು ಸಮಾಜದಲ್ಲಿ ಹೇಳುತ್ತಿದ್ದರು. ಅಂದಿನ ಕಾಲದ ಒಂದು ಸಣ್ಣ ಪ್ರಯತ್ನ ಇಂದು ಜತ್ತಿಗೆ ಭಾರತವನ್ನು ಬೆಳಗಿಸಲು ಶ್ರೀ ನರೇಂದ್ರ ಮೋದಿಯವರಂತಹ ವ್ಯಕ್ತಿಯನ್ನು ಕೊಟ್ಟಂತಹ ಸಮಾಜ ಅದು ಗಾಣಿಗ ಸಮಾಜ ಎಂದು ಹೇಳಲು ನಾನು ಇಷ್ಟಪಡುತ್ತೇನೆ. ಅದರಲ್ಲೂ ಖುಷಿಯ ವಿಚಾರವೆಂದರೆ ಈಗ ಇಲ್ಲಿ. ಜಿ.ವೈ.ಎಸ್.ಪಿ ಮೂಲಕ 100 ನರೇಂದ್ರ ಮೋದಿಯವರಂತಹ ಕೊಟ್ಟಂತಹ ಸಮಾಜ ಅದು ಗಾಣಿಗ ಸಮಾಜ ಹೇಳಿದರು.

ಈ ಜಿ.ವೈ.ಎಸ್.ಪಿ ತಂಡದ ಯುವಕರನ್ನು ನೋಡಿ ತುಂಬಾ ಖುಷಿಯಾಗುತ್ತಿದ್ದು ಸ್ವಾಮಿ ವಿವೇಕಾನಂದ ದೇವಿ, ಸರಸ್ವತಿಯ ಭಾವಚಿತ್ರವನ್ನು ಇಟ್ಟುಕೊಂಡು ದೀಪ ಬೆಳಗಿಸಿದ್ದಾರೆ.
ಅಂದು ವಿವೇಕಾನಂದರು ಹೇಳಿದ್ದು ಅದೇ, 100 ಜನ ಸದ್ರಡ ಯುವಕರನ್ನು ಕೊಡಿ ಸಶಕ್ತ ಭಾರತವನ್ನು ನಿರ್ಮಾಣ ಮಾಡುತ್ತೇನೆಂದು ಹೇಳಿದ್ದರು. ಖಂಡಿತಾ ಇಂದು ನರೇಂದ್ರ ಮೋದಿಯವರಂತಹ ಆ 100 ಜನ ಯುವಕರು ಗಾಣಿಗ ಸಮಾಜವನ್ನು ಒಂದು ಉತ್ತಮ ಹಾದಿಯಲ್ಲಿ ನಡೆಸಬೇಕೆಂಬ ದೃಷ್ಟಿಯಿಂದ ಮಾಡುವಂತಹ ಪ್ರಯತ್ನಕ್ಕೆ ನಾನು ಮೊದಲಾಗಿ ಗಾಣಿಯಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ.) ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಲಾಲ್ ಸುವರ್ಣ, ಪ್ರೇಮ್ ಸಾಲ್ಯಾನ್ ಬಿಜೈ, ರಮೇಶ್ ಮೆಂಡನ್, ವೀಣಾ ಯೋಗೀಶ್, ಶಾರದಾ ಚಂದ್ರ, ಎಂ ದೇವಪ್ಪ ಸಫಲಿಗ ರಾಜೇಶ್ ಮೂಡಬಿದ್ರೆ, ಭಾಸ್ಕರ ಎಸ್. ಎಡಪದವು , ಸಂಜೀವ ಅಡ್ಯಾರ್ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಣ ಕ್ಷೇತ್ರದ ಸಾಧಕಿ ಶಿಖಾ ಎಸ್. ಅವರನ್ನು ಸನ್ಮಾನಿಸಲಾಯಿತು. ನಾಟಕ ರಂಗದಲ್ಲಿ ಬಹುಮಾನ ಪಡೆದಿರುವ ಭರತ್ ನರಿಕೊಂಬು ಅವರನ್ನು ಗೌರವಿಸಲಾಯಿತು. ಪ್ರಮೋದ್ ಕರ್ಕೇರ ಸ್ವಾಗತಿಸಿದರು. ಶ್ರೀ ನಿಧಿ ವಂದಿಸಿದ್ದರು. ನೀತಾ ಜೀವನ್ ಕಾರ್ಯಕ್ರಮ ನಿರೂಪಿಸಿದ್ದರು.


Spread the love

Exit mobile version