Home Mangalorean News Kannada News ಗೃಹ ಮಂತ್ರಿಗಳೇ ಆ್ಯಂಟಿ ಕಮ್ಯುನಲ್ ಫೋರ್ಸ್ ಸ್ಥಾಪಿಸಲು ಇನ್ನೆಷ್ಟು ಅಮಾಯಕರ ಜೀವ ಬಲಿ ಬೇಕು? :...

ಗೃಹ ಮಂತ್ರಿಗಳೇ ಆ್ಯಂಟಿ ಕಮ್ಯುನಲ್ ಫೋರ್ಸ್ ಸ್ಥಾಪಿಸಲು ಇನ್ನೆಷ್ಟು ಅಮಾಯಕರ ಜೀವ ಬಲಿ ಬೇಕು? : ಅನ್ಸಾರ್ ಅಹಮದ್ ಉಡುಪಿ

Spread the love

ಗೃಹ ಮಂತ್ರಿಗಳೇ ಆ್ಯಂಟಿ ಕಮ್ಯುನಲ್ ಫೋರ್ಸ್ ಸ್ಥಾಪಿಸಲು ಇನ್ನೆಷ್ಟು ಅಮಾಯಕರ ಜೀವ ಬಲಿ ಬೇಕು? : ಅನ್ಸಾರ್ ಅಹಮದ್ ಉಡುಪಿ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಮುಗಲಭೆ ನಡೆಯುತ್ತಿದ್ದು, ಅದೆಷ್ಟೋ ಅಮಾಯಕರು ಜೀವ ತೆತ್ತಿರುತ್ತಾರೆ. ಮೊನ್ನೆಯಷ್ಟೇ ಸುಹಾಸ್ ಶೆಟ್ಟಿಯವರ ಕೊಲೆ ನಡೆದಾಗ  ಗೃಹ ಮಂತ್ರಿಗಳು ಇಂತಹ ಪ್ರಕರಣಗಳು ಮರುಕಳಿಸದಂತೆ ಆ್ಯಂಟಿ ಕಮ್ಯುನಲ್ ಫೋರ್ಸ್ ರಚಿಸಲಾಗುವುದು ಎಂದು ಭರವಸೆ ನೀಡಿ ನೀಡಿದ್ದರು. ಆ ಘಟನೆ ನಡೆದ ನಂತರ ಈಗ ಇನ್ನೊಬ್ಬ ಅಮಾಯಕನ ಕೊಲೆ ನಡೆದಿದೆ. ಗೃಹ ಮಂತ್ರಿಗಳೇ ತಾವು ಹೇಳಿರುವ ಆ್ಯಂಟಿ ಕಮ್ಯುನಲ್ ಫೋರ್ಸ್ ರಚಿಸಲು ಇನ್ನೆಷ್ಟು ಅಮಾಯಕ ಬಡವರ ಮನೆಯ ಮಕ್ಕಳ ಜೀವ ಬಲಿ ಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಪ್ರಶ್ನಿಸಿರುತ್ತಾರೆ.

 ಗೃಹ ಮಂತ್ರಿಗಳು ಕೂಡಲೇ ತಮ್ಮ ರಾಜಕೀಯ ಲೆಕ್ಕಾಚಾರವನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಮೊದಲ ಪ್ರಾತಿನಿಧ್ಯ ನೀಡಿ ಆ್ಯಂಟಿ ಕಮ್ಯುನಲ್ ಫೋರ್ಸ್ ರಚನೆಯ ಬಗ್ಗೆ ಕ್ರಮ ಕೈಗೊಂಡು ಕರಾವಳಿ ಜಿಲ್ಲೆಗಳಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಆಗ್ರಹಿಸಿದ್ದಾರೆ.


Spread the love

Exit mobile version