ಛಾಯಾಗ್ರಾಹಕರಿಗೆ ಮಾಜಿ ಶಾಸಕ ಲೋಬೊರವರಿಂದ ದಿನಸಿ ಕಿಟ್ ಗಳ ವಿತರಣೆ 

Spread the love

ಛಾಯಾಗ್ರಾಹಕರಿಗೆ ಮಾಜಿ ಶಾಸಕ ಲೋಬೊರವರಿಂದ ದಿನಸಿ ಕಿಟ್ ಗಳ ವಿತರಣೆ 

ಮಂಗಳೂರು: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್, ಮಂಗಳೂರು ವಲಯ, ಇದರ ಸಂಘದ ಸದಸ್ಯರಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊರವರು  ಕದ್ರಿಯಲ್ಲಿರುವ ಛಾಯಾ ಭವನ ಕಟ್ಟಡದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಲೋಬೊರವರು ಮಾತನಾಡುತ್ತಾ, ಛಾಯಾಗ್ರಾಹಕರದು ಸ್ವಂತ ಉದ್ಯೋಗ. ಎಲ್ಲಾ ಛಾಯಾಗ್ರಾಹಕರು ಸ್ಥಿತಿವಂತರಲ್ಲ. ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕಿನಿಂದ ಹಲವಾರು ಕಾರ್ಯಕ್ರಮಗಳು ರದ್ದಾಗಿರುವ ಪರಿಣಾಮದಿಂದ ಛಾಯಾಗ್ರಾಹಕರು ಕಂಗೆಟ್ಟಿದ್ದಾರೆ. ಕೆಲವು ಛಾಯಾಗ್ರಾಹಕರು ಬಡತನದಿಂದ ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಕೋವಿಡ್ ಲಾಕ್ ಡೌನ್ ನಿಂದ ಕೆಲವೊಂದು ಕೈಗಾರಿಕೆಗಳಿಗೆ ಸರಕಾರ ವಿನಾಯಿತಿ ನೀಡಿದೆ. ಆದರೆ ಛಾಯಾಗ್ರಾಹಕರ ಸ್ಟುಡಿಯೋಗಳಿಗೆ ಸರಕಾರ ವಿನಾಯಿತಿ ನೀಡಿಲ್ಲ. ಇದರಿಂದಲೇ ಛಾಯಾಗ್ರಾಹಕರಿಗೆ ಸಮಸ್ಯೆ ಉಂಟಾದದು. ಅದಕ್ಕೋಸ್ಕರವೇ ಕಾಂಗ್ರೆಸ್ ಪಕ್ಷ ಇಂದು ಬಡವರಿಗೆ ಸಹಾಯ ಮಾಡಲು ಮುಂದೆ ಬಂದಿದೆ. ಪ್ರಶ್ನಾತೀತವಾಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕರ ಕಷ್ಟಕ್ಕೆ ಪ್ರಾಮಾಣಿಕ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಂದನೆ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಅಸೋಸಿಯೇಷನ್ ಅಧ್ಯಕ್ಷ ಮಧು ಮಂಗಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಸ್ಟಾನಿ ಅಲ್ವಾರಿಸ್, ಟಿ. ಕೆ. ಸುಧೀರ್, ನೀರಜ್ ಪಾಲ್, ಮುಖಂಡರುಗಳಾದ ರಮಾನಂದ ಪೂಜಾರಿ, ಆಸೀಫ್ ಜೆಪ್ಪು, ಸವಾನ್ ಎಸ್. ಕೆ., ಅಶೋಕ್, ಆಸ್ಟನ್, ಶಾನ್ ಡಿಸೋಜಾ, ಲಕ್ಷ್ಮಣ್ ಶೆಟ್ಟಿ, ರೋಷನ್, ಉದಯ್ ಕುಂದರ್, ಯಸ್ವಂತ್ ಪ್ರಭು, ಛಾಯಾಗ್ರಾಹಕರ ಸಂಘದ ಶ್ರೀಕಾಂತ್, ವಿಠಲ್ ಚೌಟ, ಜಗನ್ನಾಥ್ ಶೆಟ್ಟಿ, ಹರೀಶ್ ಅಡ್ಯಾರ್, ಅಜಯ್ ಮೊದಲಾದವರು ಉಪಸ್ಥಿತರಿದ್ದರು.


Spread the love

2 Comments

  1. To say gernment has not given leniency to Photographers is wrong
    However photographers association has enough funds in fixed deposits. Under section 53 9f societies act, during pandemic times money in society corpus can be equally distributed to all members. No requirement to blame or beg government

  2. I will be really happy if Congress can come forward and help in paying rentals of studios and their homes for next 6 months.
    Lets not politicise a pandemic.
    Congress please supply ration for 3 months atleast to needy families, please help..

Comments are closed.