Home Mangalorean News Kannada News ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಏರಲು ಸಂಸದೆ, ಉಸ್ತುವಾರಿ ಸಚಿವ, ಶಾಸಕರ ನಿರ್ಲಕ್ಷ್ಯ ಕಾರಣ – ವಿಶ್ವಾಸ್...

ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಏರಲು ಸಂಸದೆ, ಉಸ್ತುವಾರಿ ಸಚಿವ, ಶಾಸಕರ ನಿರ್ಲಕ್ಷ್ಯ ಕಾರಣ – ವಿಶ್ವಾಸ್ ಅಮೀನ್

Spread the love

ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಏರಲು ಸಂಸದೆ, ಉಸ್ತುವಾರಿ ಸಚಿವ, ಶಾಸಕರ ನಿರ್ಲಕ್ಷ್ಯ ಕಾರಣ – ವಿಶ್ವಾಸ್ ಅಮೀನ್

ಉಡುಪಿ: ಉಡುಪಿಯಲ್ಲಿ ಕಳೆದ ಒಂದೆರಡು ವಾರದಿಂದ ಗರಿಷ್ಠ ಪ್ರಮಾಣದಲ್ಲಿ ಕೋರೊನಾ ಪಾಸಿಟಿವ್ ಸಂಖ್ಯೆ ಏರಲು ಉಡುಪಿ ಜಿಲ್ಲೆಯ 5 ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ನೇರವಾಗಿ ಹೊಣೆಯಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದ್ದಾರೆ.

ಕೋರೊನಾ ಹಬ್ಬುವ ಮೊದಲು ಲಾಕ್ ಡೌನ್ ಜಾರಿ ಮಾಡಿದ ಸರಕಾರಗಳು, ಕಾರ್ಮಿಕರು ಮತ್ತು ಜನಸಾಮಾನ್ಯರಿಗೆ ಮನೆಯಲ್ಲಿ ಬಂಧಿಯಾಗಿಸಿದ್ದರು. ನಂತರ ಲಾಕ್ ಡೌನ್ ಸಡಿಲಿಸುತ್ತಾ ಬಂದರು, ಜೋತೆಗೆ ಕೋರೊನಾ ಪ್ರಕರಣ ಹೆಚ್ಚಿಸುತ್ತಾ ಬಂದರು. ರಾಜ್ಯ, ದೇಶದಲ್ಲಿ ಪ್ರಕರಣಗಳು ನೂರರಲ್ಲಿದ್ದಾಗ ರೈಲು ಬಸ್ಸು ವಿಮಾನ ಬಂದ್ ಮಾಡಿಸಿದರು, ಲಕ್ಷಗಟ್ಟಲೇ ಪ್ರಕರಣ ಕಂಡಾಗ ಎಲ್ಲವನ್ನು ಮತ್ತೆ ಪ್ರಾರಂಭ ಮಾಡಿದರು.

ಅದೇ ರೀತಿ ಉಡುಪಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಮೂರರಲ್ಲಿದ್ದಾಗ ಅಂತರ್ಜಿಲ್ಲಾ/ಅಂತರ್ ರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿದರು ಅದೇ ಪ್ರಕರಣಗಳು 200 ದಾಟುತ್ತಿದ್ದಾಗ ಮಾತ್ರ ಕ್ವಾರಂಟೈನ್ ಬೇಡ ಎಂದು ಎಲ್ಲರನ್ನೂ ಮನೆಗೆ ಕಳುಹಿಸಿ ಕಣ್ಮುಚ್ಚಿ ಕುಳಿತು ಸರಕಾರ, ಶಾಸಕರು, ಸಚಿವರು ಸಂಸದರು ತಮಾಷೆ ನೋಡುತ್ತಾ ಕುಳಿತರು.

ಉಡುಪಿ ಜಿಲ್ಲೆಯಲ್ಲಿ ಶಂಕಿತರ ಮತ್ತು ಸೋಂಕಿತರ ಪತ್ತೆಗೆ ಸಾವಿರಾರು ಸ್ಯಾಂಪಲ್ ಪ್ರತಿ ದಿನ ಬರಲಾರಂಭಿಸಿದರು ಜಿಲ್ಲೆಯ ಎಲ್ಲಾ ಶಾಸಕರು ಜಿಲ್ಲೆಯಲ್ಲಿ ಪರೀಕ್ಷಾ ಲ್ಯಾಬ್ ತೆರೆಯಲು ಯಾವುದೇ ಒತ್ತಡ ಹೇರುವ ಕೆಲಸವನ್ನು ಈ ಭಾಗದ ಪ್ರಭಾವಿ ಸಂಸದೆ ಶೋಭಾ ಕರಂದ್ಲಾಜೆಯಾಗಲಿ ಅಥವಾ ರಾಜ್ಯದ ಪ್ರಭಾವಿ ಗೃಹ ಖಾತೆಯನ್ನೇ ನಿರ್ವಹಿಸುತ್ತಿರುವ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಮೇಲೆ ಯಾವುದೇ ಒತ್ತಡ ಹೇರುವ ಕೆಲಸವನ್ನು ಮಾಡಿಲ್ಲ. ಅದಕ್ಕಿಂತಲೂ ಮಿಗಿಲಾಗಿ ಕೊರೋನಾ ಸಮಯದಲ್ಲಿ ಜಿಲ್ಲೆಯ ಜನತೆಯ ಜೊತೆ ಇರಬೇಕಾಗಿದ್ದ ಸಂಸದರು ಮತ್ತು ಸಚಿವರು ಕೇವಲ ಅತಿಥಿಗಳಂತೆ ಬಂದು ಹೋಗುವ ಕೆಲಸ ಮಾಡಿದರು ಬಿಟ್ಟರೆ ಜನರ ನೋವಿಗೆ ದನಿಯಾಗುವ ಕೆಲಸ ಮಾಡಿಲ್ಲ
ಸಾವಿರಾರು ಸ್ಯಾಂಪಲ್ ಗಳು ಪಕ್ಕದ ಜಿಲ್ಲೆಗೆ ಕಳುಹಿಸಿ ವಾರಗಟ್ಟಲೇ ಕಾಯುತ್ತಿದ್ದ ಜಿಲ್ಲಾಡಳಿತಕ್ಕೂ ಜಿಲ್ಲೆಗೊಂದು ಲ್ಯಾಬ್ ಪ್ರಾರಂಭಿಸಿ ಪ್ರತಿದಿನದ ಪರೀಕ್ಷೆಯ ವರದಿ ಅದೇ ದಿನವೇ ಸಿಗುವಂತಹ ಕ್ರಮಕ್ಕೆ ಮುಂದಾಗಲೇ ಇಲ್ಲ.
14 ದಿನ ಸರಕಾರಿ ಮತ್ತು ಹೋಟೆಲ್ ಕ್ವಾರಂಟೈನ್ ಎಂದು ಬಂದವರಿಗೆ 16-18ಕ್ಕೂ ಹೆಚ್ಚು ದಿನ ಕಳೆದರೂ ವರದಿ ಬಂದಿಲ್ಲ ಎಂಬ ಕಾರಣಕ್ಕೆ ಕ್ವಾರಂಟೈನ್ ಮುಂದುವರಿಸಿದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಜಿಲ್ಲಾಡಳಿತ ಮಾಡದೇ ಇರುವುದ ಕೂಡ ನೋವಿನ ಸಂಗತಿಯಾಗಿದೆ.
ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯ ಸರಕಾರದ ಆದೇಶದ ಮೇರೆಗೆ ಜಿಲ್ಲಾಡಳಿತವು 14ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದವರ ಜೊತೆಗೆ 7 ದಿನ ಪೂರೈಸಿದವರನ್ನು ವರದಿ ಪರೀಶೀಲಿಸದೇ ಮನೆಗೆ ಕಳುಹಿಸಿದ್ದರ ಪರಿಣಾಮ ಜಿಲ್ಲೆಯಾದ್ಯಂತ ಪಾಸಿಟಿವ್ ಇರುವವರು ಹೆಚ್ಚಾಗುತ್ತಿದ್ದು ಇದರಿಂದ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ. ಸರಕಾರ ಪ್ರತಿ ದಿನದ ಪರೀಕ್ಷೆಯ ವರದಿ ಪ್ರತಿ ದಿನ ಸಿಗುವಂತೆ ಮಾಡಿದ್ದರೇ ಇಷ್ಟೇಲ್ಲಾ ಸಮಸ್ಯೆ ಬರುತ್ತಿರಲಿಲ್ಲ….

ಕೇಂದ್ರ ಸರಕಾರದ ಅಧೀನದ ಐಸಿ ಎಮ್ ಆರ್ ನಿಂದ ಸರಕಾರಿ ಮತ್ತು ಖಾಸಗಿ ಲ್ಯಾಬ್ ಗಳಿಗೆ ಮಂಜೂರಾತಿ ಪ್ರಾರಂಭದಲ್ಲೇ ನೀಡಿಸಲಾಗದ ಲೋಕಸಭೆ ಪ್ರತಿನಿಧಿ, ಸರಕಾರದ ಆದೇಶಕ್ಕೆ ಬೆನ್ನೆಲುಬುಗಾಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ, ಸರಕಾರದ ಮೇಲೆ ಒತ್ತಡ ಹೇರಬೇಕಿದ್ದ, ಸರಕಾರದಿಂದ ಸಮಸ್ಯೆ ಪರಿಹರಿಸಬೇಕಿದ್ದ ಶಾಸಕರು ಬೇರೆ ಪ್ರಚಾರ ಕೆಲಸಗಳಲ್ಲಿ ಭಾಗಿಯಾಗಿದ್ದರ ವರದಾನವಾಗಿ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ.

ಅದರಲ್ಲೂ ಐವರು ಸೋಂಕಿತರ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿ ಸಿಗದಿರುವ ಪ್ರಕರಣಗಳು ಮೇಲುಸ್ತುವಾರಿ ನಡೆಸಿ ಆಡಳಿತಕ್ಕೆ ಮಾರ್ಗದರ್ಶನ ಮತ್ತು ಸರಕಾರದಿಂದ ಅಗತ್ಯ ಸಹಾಯಕ್ಕೆ ಕ್ರಮವಹಿಸಬೇಕಿದ್ದ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಇಂದಿನ ಪರಿಸ್ಥಿತಿಯ ಹೊಣೆ ಹೊರಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love

Exit mobile version