Home Mangalorean News Kannada News ಜೀವ ಬೆದರಿಕೆ ಎದುರಿಸುತ್ತಿರುವ ಕಲ್ಕಡ್ಕ ಭಟ್ಟರಿಗೆ ಭದ್ರತೆ ನೀಡುವಂತೆ ಬಿಜೆಪಿ ಆಗ್ರಹ

ಜೀವ ಬೆದರಿಕೆ ಎದುರಿಸುತ್ತಿರುವ ಕಲ್ಕಡ್ಕ ಭಟ್ಟರಿಗೆ ಭದ್ರತೆ ನೀಡುವಂತೆ ಬಿಜೆಪಿ ಆಗ್ರಹ

Spread the love

ಜೀವ ಬೆದರಿಕೆ ಎದುರಿಸುತ್ತಿರುವ ಕಲ್ಕಡ್ಕ ಭಟ್ಟರಿಗೆ ಭದ್ರತೆ ನೀಡುವಂತೆ ಬಿಜೆಪಿ ಆಗ್ರಹ

ಮಂಗಳೂರು: ಆರ್‍ಎಸ್‍ಎಸ್‍ನ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಬ್ರಜೇಶ್ ಚೌಟ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರು ಮುಸ್ಲಿಂಸ್ ಅನ್ನುವ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿರುವ ಸದಸ್ಯ ಎಸ್‍ಡಿಪಿಐ ಮುಖಂಡ ಅಶ್ರಫ್ ಕೊಲೆಯಾದ ನಂತರ ತನ್ನ ಖಾತೆಯಲ್ಲಿ ಬರೆದಂತೆ ಆರ್‍ಎಸ್‍ಎಸ್‍ನ ಮುಖಂಡ ಶರತ್‍ನ ಕೊಲೆಯಾಗಿದೆ. ಸದ್ರಿ ಖಾತೆಯಲ್ಲಿ ನಿನ್ನೆಯ ದಿನ ಕೂಡಾ ಕೋಮುದ್ವೇಷ ಹರಡುವ ಹಾಗೂ ಆರ್‍ಎಸ್‍ಎಸ್ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‍ರನ್ನು ಕೊಲೆ ಮಾಡುವ ಬಗ್ಗೆ ಬರೆಯಲಾಗಿದೆ. ಹೀಗಾಗಿ ಸದ್ರಿ ಮತಾಂಧರ ಮುಂದಿನ ಗುರಿ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅನ್ನುವುದು ಸ್ಪಷ್ಟ.

ಹಿಂದೂಗಳ ಪ್ರಮುಖ ನಾಯಕರ ಕೊಲೆಯಲ್ಲಿ, ಎಸ್.ಡಿ.ಪಿ.ಐ, ಪಿ.ಎಫ್.ಐ, ಕೆ.ಎಫ್.ಡಿ ಮುಂತಾದ ಮತಾಂಧ ಶಕ್ತಿಗಳ ಕೈವಾಡವಿರುವುದು ಎಲ್ಲಾ ಕೊಲೆಗಳಲ್ಲಿ ಸಾಬೀತಾಗಿದೆ. ಇದಕ್ಕೆ ಬೆಂಬಲ ಎಂಬಂತೆ ರಾಜ್ಯ ಸರ್ಕಾರ ಕೂಡಾ ಸದ್ರಿ ಮತಾಂಧ ಸಂಘಟನೆಗಳಿಗೆ ನಿಷೇಧ ಹೇರುವ ಬದಲು ಅವರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ತನ್ನ ಅಧಿಕಾರ ದುರುಪಯೋಗ ಮಾಡಿ ಪ್ರಕರಣಗಳನ್ನೇ ಹಿಂಪಡೆದಿದೆ. ಇದರಿಂದ ಉತ್ತೇಜಿತರಾದ ಸದ್ರಿ ಮತಾಂಧ ಶಕ್ತಿಗಳು ರಾಜ್ಯಾದ್ಯಂತ ಹಿಂದೂ ನಾಯಕರ ಹತ್ಯೆಯಲ್ಲಿ ತೊಡಗಿದೆ.

ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಕೇವಲ ಹಿಂದೂ ನಾಯಕರು ಮಾತ್ರವಾಗಿರದೆ ಕಲ್ಲಡ್ಕದಂತ ಪರಿಸರದಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಹಾಗೂ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಸದ್ರಿ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲಾ ಮತದ ವಿದ್ಯಾರ್ಥಿಗಳು ಕೂಡ ಯಾವುದೇ ಬೇಧ ಭಾವವಿಲ್ಲದೆ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಮುದ್ವೇಷ ಹರಡುವ ಹಾಗೂ ನಮ್ಮ ಹಿರಿಯ ಮುಖಂಡರಿಗೆ ಹಲವು ದಿನಗಳಿಂದ ಮತಾಂಧರಿಂದ ಕೊಲೆ ಬೆದರಿಕೆ ಇದ್ದೇ ಇದೆ.

ಆದರೆ ಸದ್ರಿ ಸಂದರ್ಭ ಅತ್ಯಂತ ಗಂಭೀರವಾಗಿದ್ದು, ಜಿಲ್ಲಾಡಳಿತ ಡಾ| ಪ್ರಭಾಕರ ಭಟ್ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಹಾಗೂ ಅಂಗರಕ್ಷಣೆಯನ್ನು ಇನ್ನಷ್ಟು ಬಲಗೊಳಿಸಬೇಕು. ಹಾಗೇನಾದರೂ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಮತಾಂಧ ಶಕ್ತಿಗಳು ಕೈ ಮಾಡಿದಲ್ಲಿ ಸೂಕ್ತ ಉತ್ತರವನ್ನು ನೀಡಲು ಕೂಡಾ ಭಾರತೀಯ ಜನತಾ ಪಾರ್ಟಿ ತಯಾರಿದೆ ಎನ್ನುವ ಎಚ್ಚರಿಕೆಯನ್ನು ಕೂಡಾ ಈ ಮೂಲಕ ನೀಡುತ್ತಿದ್ದೇನೆ.

ಸದ್ರಿ `ಮಂಗಳೂರು ಮುಸ್ಲಿಂಸ್’ ಫೇಸ್‍ಬುಕ್ ಸದಸ್ಯನ ವಿರುದ್ಧ ಪೊಲೀಸ್ ದೂರು ಕೂಡಾ ನೀಡುತ್ತಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಕೂಡಾ ಒತ್ತಾಯ ಮಾಡುತ್ತೇವೆ.

ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಘಟನೆಗೆ ಸಂಬಂಧಿಸಿ ಕೂಡಲೇ ರಾಜಿನಾಮೇ ನೀಡುವುದರೊಂದಿಗೆ ಬಂಧನಕ್ಕೆ ಒಳಗಾದ ಅಮಾಯಕ ಕಾರ್ಯರ್ತರನ್ನು ಬಿಡುಗಡೆ ಮಾಡಬೇಕು. ಕೋಮು ಭಾವನೆ ಪ್ರಚೋದಿಸುತ್ತಿರುವ ಮಂಗಳೂರು ಮುಸ್ಲಿಂ ಪೇಸ್ ಬುಕ್ ಪೇಜ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಕುಮಾರ್ ಹತ್ಯಾ ಯತ್ನವನ್ನು ಖಂಡಿಸಿ ನಿನ್ನೆ ಬಿ.ಸಿ.ರೋಡ್ ನಲ್ಲಿ ಶಾಂತಿಯುತ ಪ್ರತಿಭಟನೆ ಹಿಂದೂ ಹಿತರಕ್ಷಣ ಸಮಿತಿಯ ನೇತ್ರತ್ವದಲ್ಲಿ ನಡೆದಿತ್ತು. ಭಾ.ಜ.ಪ ಪಕ್ಷ ಕೂಡ ಇದಕ್ಕೆ ಬೆಂಬಲ ನೀಡಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ನಿನ್ನೆ ಸಂಜೆ ಶರತ್ ನಿಧನದ ನಂತರ ಇಂದು ನಡೆದ ಶವಯಾತ್ರೆಯಲ್ಲಿ ಸಾವಿರಾರು ಜನ ಸಾರ್ವಜನಿಕರು ಸ್ವ ಇಚ್ಚೆಯಿಂದ ಭಾಗವಹಿಸಿದ್ದರು. ಆದರೆ ಕೈಕಂಬದವರೆಗೆ ಶಾಂತಿಯುತ ಮೆರವಣಿಗೆ ನಡೆದಿದ್ದು , ಕೈಕಂಬದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ಶವಯಾತ್ರೆಯ ಮೇಲೆ ಕೂಡ ಸೇಡು ತೀರಿಸುವ ಮತಾಂಧತೆಯನ್ನು ಮೆರೆಸಿರುವುದನ್ನು ಭಾ.ಜ.ಪ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ.ಹಾಗೂ ಸದ್ರಿ ಘಟನೆಯ ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರನ್ನೇ ಗುರಿಯಾಗಿಸಿ ಬಂಧನ ನಡೆಸಿ, ಪೋಲಲಿಸ್ ಇಲಾಖೆಯ ಬಲದ ಮೂಲಕ ಕಾಂಗ್ರೆಸ್ ನಮ್ಮ ಕಾರ್ಯವನ್ನು ಹತ್ತಿಕ್ಕುವುದನ್ನು ಕೂಡ ಬಿಜೆಪಿ ಖಂಡಿಸುತ್ತದೆ. ತಕ್ಷಣವೇ ಬಂಧನಕ್ಕೆ ಒಳಗಾದ ಅಮಾಯಕ ಕಾರ್ಯಕರ್ತರ ಬಿಡುಗಡೆ ಮಾಡಬೇಕು.

ಕಳೆದ ಒಂದು ತಿಂಗಳಿನಿಂದಲೂ ನಿಷೇದಾಜ್ಞೆ ಹೇರಿಕೆ, ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಆಕ್ರಮವಾಗಿ ದನ ಕಳ್ಳ ಸಾಗಾಟಣೆ,ಆಕ್ರಮ ಮರಳುಗಾರಿಕೆ ಹಾಗೂ ಡ್ರಗ್ಸ್ ಮಾಫಿಯಾದ ಹಣದ ಬಲದ ಮುಖಾಂತರ ಮುಸ್ಲಿಂ ಭಯೋತ್ಪಾಧನೆ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ಆಕ್ರಮಣ ನಡೆಸುತ್ತದೆ. ಇದಕ್ಕೆ ಕಾರಣರಾದ ಉಸ್ತುವಾರಿ ಸಚಿವರು ತಕ್ಷಣ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುತ್ತದೆ.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್,ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ ,ಜಿಲ್ಲಾ ಖಚಾಂಚಿ ಸಂಜಯ ಪ್ರಭು,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ,ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿಚಂದ್ರ , ಪಿ.ಎಂ.ಜಿಲ್ಲಾ ವಕ್ರಾರರಾದ ವಿಕಾಸ್ ಪುತ್ತೂರು, ಮಂ.ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ ,ಗೋಸಂರಕ್ಷಣಾ ಪ್ರಕೋಷ್ಠದ ವಿನಯ ಎಲ್ ಶೆಟ್ಟಿ,ಬಿಜೆಪಿ ಮುಖಂಡ ವಸಂತ ಪೂಜಾರಿ ಉಪಸ್ಥಿತರಿದ್ದರು.


Spread the love

Exit mobile version