ಜೆಪ್ಪು ಸಂತ ಅಂತೋನಿ ಆಶ್ರಮದ ನಿವಾಸಿ ಕಾಣೆ: ಪತ್ತೆಗೆ ಮನವಿ
ಮಂಗಳೂರು: ನಗರದ ಜೆಪ್ಪು ಸಂತ ಅಂತೋನಿ ಆಶ್ರಮದ ನಿವಾಸಿ ರೊನಾಲ್ಡ್ ಡಿ’ಸೋಜಾ (77) ಎಂಬವರನ್ನು ಅನಾರೋಗ್ಯದ ಕಾರಣದಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2024 ರ ಜುಲೈ 22 ರಂದು ಆಸ್ಪತ್ರೆಯ ಸಿಬ್ಬಂದಿಗಳು ಅವರು ಕಾಣೆಯಾಗಿರುತ್ತಾರೆ ಎಂದು ತಿಳಿಸಿದ್ದು, ಈ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ: ಎಣ್ಣೆ ಕಪ್ಪು ಮೈಬಣ್ಣ, ಬಿಳಿ ತಲೆ ಕೂದಲು, ಸಪೂರ ಮೈಕಟ್ಟು, ಎತ್ತರ 5.5 ಅಡಿ, ಕೊರಳಲ್ಲಿ ಜಪಮಾಲೆ ಧರಿಸಿರುತ್ತಾರೆ. ತುಳು, ಕನ್ನಡ ಕೊಂಕಣಿ ಮಾತನಾಡುತ್ತಾರೆ. ಬಲಗೈಯಲ್ಲಿ ಕ್ರಿಶ್ಚಿಯನ್ ಶಿಲುಬೆ ಇರುವ ಅಚ್ಚೆ ಇರುತ್ತದೆ. ಸಿಮೆಂಟ್ ಕಲರ್ ಟೀ ಶರ್ಟ್ ಕಪ್ಪು ಬಣ್ಣದ ಬರ್ಮುಡ ಧರಿಸಿರುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
