Home Mangalorean News Kannada News ಜ.25ರಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

ಜ.25ರಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

Spread the love

ಜ.25ರಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜನವರಿ 25 ಮತ್ತು 26 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಜನವರಿ 25ರಂದು ಬೆಳಗ್ಗೆ 9:05 – ಮಂಗಳೂರು ವಿಮಾನ ನಿಲ್ದಾಣ ಆಗಮನ, 10 – ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಸಮಾರಂಭ, 10:30- ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕೇಳ- ಕಾಶಿಪಟ್ಣ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಸಭಾಭವನ ಮತ್ತು ಅನ್ನ ಛತ್ರ ಕಟ್ಟಡಗಳ ಶಿಲಾನ್ಯಾಸ ಸಮಾರಂಭ, 11- ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಭವನದ ನವೀಕೃತ ಕಟ್ಟಡದ ಉದ್ಘಾಟನೆ ಮತ್ತು 94 ಸಿ ಹಕ್ಕು ಪತ್ರ ವಿತರಣೆ, ಮಧ್ಯಾಹ್ನ 12:30- ಕನ್ಯಾಡಿ ಗ್ರಾಮದ ಪಡ್ಪು ಕನ್ಯಾಡಿ ಶಾಲೆ ರಸ್ತೆ, ಕನ್ಯಾಡಿ ಶಾಲೆಯಿಂದ ಮೂಡಬೆಟ್ಟು, ಭೀಮಂಡೆ ರಸ್ತೆ, ಕನ್ಯಾಡಿ ಬೊಳಿಯಂಜಿ ರಸ್ತೆ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ, 1:15- ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತ ಸಂವತ್ಸರಗಳ ಸಂಭ್ರಮಾಚರಣೆ ಕಾರ್ಯಕ್ರಮ, 2- ಬೆಳ್ತಂಗಡಿ ತಾಲೂಕಿನ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಮಖಾಮ್ ಉರೂಸ್ ಕಾರ್ಯಕ್ರಮ ನಿಮಿತ್ತ ಭೇಟಿ, ಸಂಜೆ 4:30 – ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್ ಲೋಕಾರ್ಪಣೆ, 5 – ಲಾಲ್‌ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಇವರ ಸಹಯೋಗದಲ್ಲಿ ಕುಡ್ಲ ಶ್ವಾನ ಪ್ರದರ್ಶನ ಕಾರ್ಯಕ್ರಮ, ನಂತರ ರಾತ್ರಿ ನಗರದಲ್ಲಿ ವಾಸ್ತವ್ಯ.

ಜನವರಿ 26 ರಂದು ಬೆಳಗ್ಗೆ 9 – ನೆಹರು ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಧ್ವಜಾರೋಹಣ ಮತ್ತು ಸಂದೇಶ, 11- ನೆಹರೂ ಮೈದಾನದಲ್ಲಿ ಎನ್‌ಎಸ್‌ಯುಐ ಮಂಗಳೂರು ಯುನಿವರ್ಸಿಟಿ ಪ್ರಸ್ತುತಪಡಿಸುವ ರಿಪಬ್ಲಿಕ್ ಡೇ ಕಪ್ ಕಾರ್ಯಕ್ರಮ,2:15 – ಸಚಿವರು ಮಂಗಳೂರಿ ನಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


Spread the love

Exit mobile version