Home Mangalorean News Kannada News ಟೋಲ್ ಸಂಗ್ರಹ- ಮುಖ್ಯ ಕಾರ್ಯದರ್ಶಿ ಸಭೆಯವರೆಗೆ ತೀರ್ಮಾನಿಸದಿರಲು ಶೋಭಾ ಕರೆಂದ್ಲಾಜೆ ಸೂಚನೆ

ಟೋಲ್ ಸಂಗ್ರಹ- ಮುಖ್ಯ ಕಾರ್ಯದರ್ಶಿ ಸಭೆಯವರೆಗೆ ತೀರ್ಮಾನಿಸದಿರಲು ಶೋಭಾ ಕರೆಂದ್ಲಾಜೆ ಸೂಚನೆ

Spread the love

ಟೋಲ್ ಸಂಗ್ರಹ- ಮುಖ್ಯ ಕಾರ್ಯದರ್ಶಿ ಸಭೆಯವರೆಗೆ ತೀರ್ಮಾನಿಸದಿರಲು ಶೋಭಾ ಕರೆಂದ್ಲಾಜೆ ಸೂಚನೆ

ಉಡುಪಿ : ಹೆಜಮಾಡಿಯಿಂದ ಕುಂದಾಪುರದವರೆಗೆ ಸ್ಥಳೀಯರಿಂದ ಟೋಲ್ ಸಂಗ್ರಹದ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸಭೆಯವರೆಗೆ ನಿರ್ಧಾರ ಕೈಗೊಳ್ಳದಿರಲು ಸಂಸದೆ ಶೋಭಾ ಕರೆಂದ್ಲಾಜೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ವಿಷಯವನ್ನು ಸ್ಪಷ್ಟ ಪಡಿಸಿದ ಸಂಸದರು, ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಜಾರಿ ಮಾಡಿರುವುದು ಸರಿಯಲ್ಲ; ಸರ್ವಿಸ್ ರಸ್ತೆ ಮುಗಿಸದೆ, ಸ್ಥಳೀಯರಿಗೆ ಉಚಿತವಾಗಿ ಚಲಿಸಲು ಅವಕಾಶ ನೀಡದಿರುವ ನವಯುಗ್ ಕಂಪೆನಿಯ ರೀತಿ ನೀತಿಗಳು ಸರಿ ಇಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಟೋಲ್ ಜಾರಿ ಒಪ್ಪಂದದಂತೆ ಜಾರಿಯಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಮುಖ್ಯ ಕಾರ್ಯದರ್ಶಿಗಳು ಈ ಸಂಬಂಧ ಸಭೆ ಕರೆದು ನಿರ್ಧಾರ ತಳೆಯುವವರೆಗೆ ಸ್ಥಳೀಯರಿಂದ ಟೋಲ್ ಪಡೆಯಬೇಡಿ ಎಂದು ಎಂಪಿ ಮತ್ತೊಮ್ಮೆ ಹೇಳಿದರು.

ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರು ಮಾತನಾಡಿ ಬಾಕಿ ಉಳಿದ ಕೆಲಸಗಳನ್ನು ಶೀಘ್ರವಾಗಿ ಸಂಪೂರ್ಣಗೊಳಿಸಿ ಎಂದರು. ಕಾಮಗಾರಿಗಳ ಬದಲಾವಣೆ ಪಟ್ಟಿಯ ಬಗ್ಗೆಯೂ ವಿಸ್ತøತ ಚರ್ಚೆ ನಡೆಯಿತು.

ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಅಡಿಷನಲ್ ಎಸ್ ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಅನುರಾಧ, ಆರ್‍ಟಿಒ, ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.


Spread the love

Exit mobile version