ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
ಮಂಗಳೂರು: ಸಂಘರ್ಷ ಆಗುತ್ತದೆ ಎಂಬ ಕಾರಣವನ್ನಿಟ್ಟುಕೊಂಡು, ಗಣೇಶೋತ್ಸವ, ಜನ್ಮಾಷ್ಟಮಿಯಂಥಾ ಹಬ್ಬಗಳಿಗೆ ಜಿಲ್ಲಾಡಳಿತ ಹಲವು ನಿಯಮಗಳನ್ನು ವಿಧಿಸಿದೆ. ಆದರೆ ಇಷ್ಟರವರೆಗೆ ಜನ್ಮಾಷ್ಟಮಿ, ಗಣೇಶೋತ್ಸವ, ದಸರ ಮೆರವಣಿಗೆಗಳಲ್ಲಿ ಗಲಭೆ ಆಗಿದೆಯಾ? ಆ ಮೆರವಣಿಗೆಗಳಲ್ಲಿ ಗಲಭೆ ಆಗಿದಾ? ಡಿಜೆಯಿಂದ ಗಲಾಟೆಯಾಗಿದೆ, ಶಬ್ದ ಮಾಲಿನ್ಯ ಆಗಿದ್ದು ಇದಕ್ಕೆ ನಮ್ಮ ವಿರೋಧವೂ ಇದೆ. ಆದರೆ ದೊಡ್ಡ ಬಾಕ್ಸ್ ಇಟ್ರೆ ಹೇಗೆ ಗಲಾಟೆ ಆಗುತ್ತೆ? ಕಡಿಮೆ ಸೌಂಡ್ ಮಾಡಿ ಏನು ಪ್ರಯೋಜನ? ಸಾವಿರಾರು ಮಂದಿ ಸೇರುವ ಸಭೆಯಲ್ಲಿ ಹಿಂದಿನವರಿಗೆ ಕೇಳ್ತದಾ? ಕುದ್ರೋಳಿ ಉತ್ಸವವನ್ನು 10.30ಕ್ಕೆ ಮುಗಿಸಲು ಸಾಧ್ಯವಾ? ಹೀಗೆಂದು ವಿಶ್ವಹಿಂದೂ ಪರಿಷತ್ನ ಕರ್ನಾಟಕದ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಪ್ರಶ್ನಿಸಿದ್ದಾರೆ.
ಅವರು ವಿಎಚ್ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗಣೇಶೋತ್ಸವ, ದಸರಾ ಹಬ್ಬಗಳನ್ನು ಮುಂದಿಟ್ಟುಕೊಂಡು ಪೊಲೀಸ್ ಇಲಾಖೆ ಆದೇಶ ಹೊರಡಿ ಧ್ವನಿ ವರ್ಧಕಕ್ಕೆ ನಿಯಮ ವಿಧಿಸಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು 10.30ಗೆ ಮುಗಿಸಬೇಕು, ಡಿಜೆ ಬಳಸಬಾರದು, ಧ್ವನಿವರ್ಧಕ ಶಬ್ದ ಇಷ್ಟೇ ಇರಬೇಕೆಂಬ ಆದೇಶ ಕೊಟ್ಟಿದ್ದಾರೆ. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಕಮೀಷನರ್, ಜಿಲ್ಲಾ ಎಸ್ಪಿ, ಡಿಸಿ ತಿಳಿಸಿದ್ದಾರೆ. ಆದರೆ ಡಿಜೆ ಬಳಸಬಾರದು ಎಂಬ ಆದೇಶವನ್ನು ವಿಎಚ್ಪಿ ಸ್ವಾಗತಿಸಿದೆ. ಕಳೆದ ಹತ್ತಾರು ವರ್ಷಗಳಿಂದ ಡಿಜೆಗೆ ಅವಕಾಶ ಕೊಡಬಾರದು ಎಂದಿದ್ದೆವು. ಡ್ರಗ್ಸ್ ಮುಕ್ತ ಕರಾವಳಿ ಮಾಡುವ ಕ್ರಮಕ್ಕೆ ನಮ್ಮ ಸ್ವಾಗತವಿದ್ದು, ನಾವೂ ಸಹಕಾರ ಕೊಡುತ್ತೇವೆ. ಕಮಿಷನರ್ ಮಂಗಳೂರಿಗೆ ಬಂದ ಮೇಲೆ ಜಾಲತಾಣಗಳಲ್ಲಿ ಪ್ರಚೋದನಕಾರಿ ಬರಹ ಕಡಿಮೆಯಾಗಿದೆ. ಆದರೆ ಆದರೆ ಶಾಂತಿ ಸುವ್ಯವಸ್ಥೆ ನೆಪದಲ್ಲಿ ದಾರ್ಮಿಕ…
ತುಳುನಾಡು ಎಂದರೆ ಕರ್ನಾಟಕ್ಕೆ ಹೋಲಿಸಿದರೆ ವಿಶೇಷವಾಗಿದೆ. ಕೋಲ, ನಾಗಾರಾಧನೆ, ಯಕ್ಷಗಾನ… ಹೀಗೆ ಸಾಂಸ್ಕೃತ ತುಳುನಾಡು ಸಂಸ್ಕೃತಿ ಪ್ರಸಿದ್ಧವಾಗಿದೆ. ಇದಕ್ಕೆ ಈ ಕಾರ್ಯಕ್ರಮಕ್ಕೆ ವಿದೇಶಗಳಿಂದಲೂ ಬರುತ್ತಾರೆ. ಗಣೇಶೋತ್ಸವ 7, ದಸರ 10 ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮದಿಂದ ಅಲಂಕಾರ, ಶಾಮಿಯಾನ ಸ್ಪೇಜ್, ಧ್ವನಿವರ್ಧಕ ವ್ಯಾಪಾರಿಗಳು ಜೀವನ ನಡೆಸುತ್ತಾರೆ. ಆದರೆ ಹೊಸ ನಿಯಮಗಳಿಂದ ಅವರ ಜೀವನಕ್ಕೆ ಪೆಟ್ಟು ಬಿದ್ದಿದೆ. ನಿಯಮಗಳನ್ನು ಸಡಿಲಿಸುವಂತೆ ಮನವರಿಕೆ ಮಾಡಲು ಡಿಸಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಅಲ್ಲಿ ಡಿಸಿ ಇರದ ಕಾರಣ ಎಡಿಸಿಗೆ ಮನವಿ ಕೊಟ್ಟಿದ್ದೇವೆ ಎಂದರು.
ಪ್ರತಿವರ್ಷದಂತೆ ಈ ಬಾರಿಯೂ ದಾರ್ಮಿಕ ಉತ್ಸವ, ಮೆರವಣಿಗೆಗಳನ್ನು ನಡೆಸಲು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿ 2000ದ ನಿಯಮ 5(3)ರಲ್ಲಿ ಪ್ರದಕ್ತವಾಗಿರುವ ಅಧಿಕಾರ ಉಪಯೋಗಿಸಿ ಜಿಲ್ಲೆಯಲ್ಲಿ ಆಗಸ್ಟ್ 27,28,29,30,31 ಹಾಗೂ ಸೆ.2ರಂದು ಗಣೇಶೋತ್ಸವ ಮೆರವಣಿಗೆ, ಅ.1,2,3ರಂದು ದಸರಾ ಆಚರಿಸಲು ರಿಯಾಯಿತಿ ಕೊಟ್ಟು ಅನುಕೂಲ ಮಾಡಿಕೊಡುವಂತೆ ಅವರು ವಿನಂತಿಸಿದರು.
ನಮಗೆ ಗಣೇಶೋತ್ಸವ ಆಯೋಜಕರು, ಧ್ವನಿ ವರ್ಧಕ ಸಂಘದವರೂ ನಿಯಮಗಳನ್ನು ಸಡಿಲಿಸುವಂತೆ ಮನವಿ ಮಾಡಿದ್ದಾರೆ. ಹಾಗಾಗಿ ತುಳುನಾಡಿನ ಸಂಸ್ಕೃತಿಗೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಪ್ರಕರಣ: ಎಸ್ಐಟಿ ತನಿಖೆಯಿಂದ ನತ್ಯ ಬಯಲಾಗಲಿ
ಇದೇ ಸಂದರ್ಭದಲ್ಲಿ ದರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಪಂಪ್ವೆಲ್, ಎಸ್ಐಟಿ ತನಿಖೆಗೆ ನಮ್ಮ ಸ್ವಾಗತವಿದ್ದು, ಸತ್ಯ ಹೊರಬರಬೇಕಿದೆ. ಆದರೆ ಯಾವುದೇ ಕಾರಣಕ್ಕೆ ದೈವಸ್ಥಾನದ ಅವಹೇಳನ ನಡೆಯಬಾರದು, ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಜಿಲ್ಲಾಧ್ಯಕ್ಷ ಎಚ್ಕೆ ಪರುಷೋತ್ತಮ, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ ಉಪಸ್ಥಿತರಿದ್ದರು.