Home Mangalorean News Kannada News ಡಿ.29: ಲ್ಯಾಂಡ್ ಟ್ರೇಡ್ಸ್ ಸಾಲಿಟೇರ್ ವಸತಿ ಸಮುಚ್ಚಯದ ಉದ್ಘಾಟನೆ

ಡಿ.29: ಲ್ಯಾಂಡ್ ಟ್ರೇಡ್ಸ್ ಸಾಲಿಟೇರ್ ವಸತಿ ಸಮುಚ್ಚಯದ ಉದ್ಘಾಟನೆ

Spread the love

ಡಿ.29: ಲ್ಯಾಂಡ್ ಟ್ರೇಡ್ಸ್ ಸಾಲಿಟೇರ್ ವಸತಿ ಸಮುಚ್ಚಯದ ಉದ್ಘಾಟನೆ

ಮಂಗಳೂರು: ನಗರದ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವೆಲಪ್ಪರ್ಸ್ ಸಂಸ್ಥೆಯು ಹ್ಯಾಟ್‍ಹಿಲ್‍ನಲ್ಲಿ ನಿರ್ಮಿಸಿದ ಅತ್ಯಂತ ವಿಶಿಷ್ಟವಾದ “ಸಾಲಿಟೇರ್” ಬಹು ಅಂತಸ್ತುಗಳ ವಸತಿ ಸಮುಚ್ಚಯವು ಡಿ.29 ರಂದು ಸಂಜೆ ಉದ್ಘಾಟನೆಗೊಳ್ಳಲಿದೆ ಎಂದು ಲ್ಯಾಂಟ್ ಟ್ರೇಡ್ಸ್‍ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಅವರು ತಿಳಿಸಿದ್ದಾರೆ.
ಕ್ರಿಸಿಲ್ ಅಂತಾರಾಷ್ಟ್ರೀಯ ಮಾನ್ಯತಾ ಸಂಸ್ಥೆಯಿಂದ 7 ಸ್ಟಾರ್ಸ್ ಪುರಸ್ಕಾರಕ್ಕೆ ಪಾತ್ರವಾಗಿರುವ ಸಾಲಿಟೇರ್, ಕ್ರೆಡಾಯಿನಿಂದ 50 ಕ್ಕಿಂತ ಹೆಚ್ಚು ವಸತಿಗಳ ವಿಭಾಗದಲ್ಲಿ “ಕೇರ್ ಆವಾರ್ಡ್ 2019” ಪ್ರಶಸ್ತಿಯನ್ನು ಕೂಡ ಪಡೆದಿದೆ. ಆರ್ಕಿಟೆಕ್ನಿಕ್‍ನ ಆರ್ಕಿಟೆಕ್ಟ್ ಪೀಟರ್ ಮಸ್ಕರೇನಸ್ ಅವರು ಈ ಯೋಜನೆಯ ಅತ್ಯಾಕರ್ಷಕ ವಿನ್ಯಾಸವನ್ನು ರೂಪಿಸಿದ್ದಾರೆ.

ಗಣ್ಯ ಅತಿಥಿಗಳು
ಯೆನೆಪೋಯ ವಿವಿಯ ಕುಲಾಧಿಪತಿ ಆಲ್‍ಹಾಜ್ ಯೆನಪೋಯ ಅಬ್ದುಲಲ್ಲ ಕುಂಞ್ಞ ಸಮುಚ್ಚಯ ಮತ್ತು ಮಣಿಪಾಲ ವಿವಿಯ ವಿಶ್ರಾಂತ ಕುಲಪತಿ ಡಾ|ಬಿ.ಎಂ. ಹೆಗ್ಡೆ ಕ್ಲರ್ಬ ಹೌಸನ್ನು ಉದ್ಘಾಟಿಸಲಿದ್ದಾರೆ. ತೇಜಸ್ವಿನಿ ಹಾಸ್ಪಿಟಲ್ಸ್ ಸಮೂಹದ ಅಧ್ಯಕ್ಷ ಡಾ|ಎಂ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್ ವಿಶೇಷ ಅತಿಥಿಗಳಾಗಿರುತ್ತಾರೆ.
ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷ ಡಾ|ಎ.ಜೆ. ಶೆಟ್ಟಿ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಮಾಜಿ ಶಾಸಕ ಜೆ.ಆರ್.ಲೋಬೋ, ಕರ್ನಾಟಕ ಬ್ಯಾಂಕಿನ ಜಿ.ಎಂ. ಚಂದ್ರಶೇಖರ್ ರಾವ್. ಬಿ. ಅತಿಥಿಗಳಾಗಿರುತ್ತಾರೆ.

ಆಕರ್ಷಕ ಪರಿಸರ :
ಆಕರ್ಷಕ ಮತ್ತು ಸುಂದರವಾದ ಪರಿಸರದಲ್ಲಿ ಸಾಲಿಟೇರ್ ನಿರ್ಮಾಣವಾಗಿದೆ. ಪರಿಸರ ಸ್ನೇಹಿ ಜೀವನ ಶೈಲಿಗೆ ಪೂರಕವಾದ ವಾತಾವರಣವನ್ನು ಸಾಲಿಟೇರ್ ಹೊಂದಿದೆ. ನಿಸರ್ಗದತ್ತ ಸಂಪನ್ಮೂಲಗಳನ್ನು ರಕ್ಷಿಸಲಾಗುತ್ತಿದೆ. ಮಳೆನೀರು ಕೊಯ್ಲು ಇಲ್ಲಿನ ಪ್ರಮುಖ ಯೋಜನೆಗಳಲ್ಲೊಂದಾಗಿದೆ.

ಲ್ಯಾಂಡ್‍ಟ್ರೇಡ್ಸ್ ಪರಂಪರೆ :
1992 ರಲ್ಲಿ ಕೆ.ಶ್ರೀನಾಥ್ ಹೆಬ್ಬಾರ್ ಅವರು ಸ್ಥಾಪಿಸಿದ ಲ್ಯಾಂಡ್‍ಟ್ರೇಡ್ಸ್ ಸಂಸ್ಥೆಯು ಈಗಾಗಲೇ ವಸತಿಯುತ ಮತ್ತು ವಾಣಿಜ್ಯ ಸಂಬಂಧಿತ 37 ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಶ್ರೇಷ್ಠ ಗುಣಮಟ್ಟ ಗ್ರಾಹಕರ ಸಂಪೂರ್ಣ ವಿಶ್ವಾಸದಿಂದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ರೂಪುಗೊಂಡಿದೆ. ಐ.ಎಸ್.ಓ.9001:2015 ಮಾನ್ಯತೆಯ ಜತೆಗೆ ಕ್ರಿಸಿಲ್‍ನ ಗರಿಷ್ಠ ರೇಟಿಂಗ್ ಸಹಿತ ಅನೇಕ ಪ್ರಥಮಗಳಿಗೆ ಪಾತ್ರವಾಗಿರುವ ಏಕೈಕ ಬಿಲ್ಡರ್ಸ್ ಸಂಸ್ಥೆಯಾಗಿದೆ.
ಲ್ಯಾಂಡ್‍ಟ್ರೇಡ್ಸ್‍ನಿಂದ ಸುರತ್ಕಲ್ ಲೈಟ್‍ಹೌಸ್ ಬಳಿ ಎಮೆರಾಲ್ಡ್ ಬೇ ಎಂಬ ಸರ್ವಸಜ್ಜಿತ ನಿವೇಶನಗಳು, ದೇರೆಬೈಲ್ ಚರ್ಚ್ ಬಳಿ ಹ್ಯಾಬಿಟಟ್ 154 ಎಂಬ ಬಜೆಟ್ ಅಪಾರ್ಟ್‍ಮೆಂಟ್‍ಗಳು, ಬಲ್ಮಠದಲ್ಲಿ ಮೈಲ್‍ಸ್ಟೋನ್-25 ಎಂಬ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತದೆ.
ಪೂರಕ ಮಾಹಿತಿ : ತಿತಿತಿ.ಟಚಿಟಿಜಣಡಿಚಿಜes.iಟಿ

32 ಅಂತಸ್ತುಗಳಲ್ಲಿ 143 ಅಪಾರ್ಟ್‍ಮೆಂಟ್
ಲ್ಯಾಂಡ್‍ಟ್ರೇಡ್ಸ್‍ನ “ಸಾಲಿಟೇರ್”ನಲ್ಲಿ ವಾಸ್ತುವೈಭವ ಸಹಿತವಾದ 32 ಅಂತಸ್ತುಗಳಲ್ಲಿ 2-3-4- ಬಿಎಚ್‍ಕೆಗಳ ಮತ್ತು 5 ಬಿಎಚ್.ಕೆ. ಡೂಪ್ಲೆಕ್ಸ್‍ಗಳ 143 ಅಪಾರ್ಟ್‍ಮೆಂಟ್‍ಗಳಿವೆ ಎಂದು ಲ್ಯಾಂಡ್‍ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ದಾಖಲೆಗಳು
ಸಾಲಿಟೇರ್ ವಸತಿ ಸಮುಚ್ಚಯದ ಎಲ್ಲ ದಾಖಲೆ ಪತ್ರಗಳು ಲ್ಯಾಂಡ್‍ಟ್ರೇಡ್ಸ್‍ಗೆ ವಿವಿಧ ಇಲಾಖೆಗಳು ನೀಡಿವೆ. ನಗರ ಪಾಲಿಕೆಯಿಂದ ಕಟ್ಟಡ ಪ್ರವೇಶಪತ್ರ, ಡೋರ್ ನಂಬರ್, ಅಗ್ನಿಶಾಮಕ ದಳದಿಂದ ಅಚಿತಿಮ ಅಂಗೀಕೃತ ಪತ್ರ, ಮಾಲಿನ್ಯರಹಿತ ಪರಿಸರ ಅಚಿತಿಮ ಪ್ರಮಾಣ ಪತ್ರ, ವಿದ್ಯುತ್, ನೀರಿನ ಸಂಪರ್ಕ ಇತ್ಯಾದಿ ಎಲ್ಲ ಅಧಿಕೃತ ಮತ್ತು ಅವಶ್ಯಕ ದಾಖಲೆಗಳನ್ನು ಪಡೆದು ಗ್ರಾಹಕರಿಗೆ ವಿಶ್ವಾಸದಿಂದ ಅರ್ಪಿಸುತ್ತಿದ್ದೇವೆ ಎಂದು ಶ್ರೀನಾಥ್ ಹೆಬ್ಬಾರ್ ಹೇಳಿದ್ದಾರೆ.


Spread the love

Exit mobile version