Home Mangalorean News Kannada News ತರಕಾರಿ ಸಾಗಾಟ ವಾಹನದಲ್ಲಿ ಅಕ್ರಮ ಗೋ ಸಾಗಾಟ – 15ಕ್ಕೂ ಅಧಿಕ ಹಸುಗಳ ರಕ್ಷಣೆ

ತರಕಾರಿ ಸಾಗಾಟ ವಾಹನದಲ್ಲಿ ಅಕ್ರಮ ಗೋ ಸಾಗಾಟ – 15ಕ್ಕೂ ಅಧಿಕ ಹಸುಗಳ ರಕ್ಷಣೆ

Spread the love

ತರಕಾರಿ ಸಾಗಾಟ ವಾಹನದಲ್ಲಿ ಅಕ್ರಮ ಗೋ ಸಾಗಾಟ – 15ಕ್ಕೂ ಅಧಿಕ ಹಸುಗಳ ರಕ್ಷಣೆ

ಬೆಳ್ತಂಗಡಿ: ಮಂಗಳೂರಿಗೆ ಅಕ್ರಮವಾಗಿ ಗೋ ಸಾಗಾಟ ನಡೆಸಲು ಹೊರಟ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ಶುಕ್ರವಾರ ಬೆಳಗ್ಗಿನ ಜಾವ ತಡೆಹಿಡಿದ ಘಟನೆ ನಡೆದಿದೆ.

ಹಿಂಸಾತ್ಮಕವಾಗಿ ತರಕಾರಿ ಸಾಗಾಟದ ವಾಹನದಲ್ಲಿ ಸುಮಾರು 10-15 ಹಸುಗಳನ್ನು ಗೋವಧೆಗೆಂದು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿಕೊಂಡು ಹೋಗಿ ತಡೆಹಿಡಿದಿದ್ದಾರೆ.

ಘಟನೆಯಲ್ಲಿ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ ವಾಹನ ಹಾಗೂ 15ಕ್ಕೂ ಅಧಿಕ ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ.


Spread the love

Exit mobile version