Home Mangalorean News Kannada News ತಲೆ ಮರೆಸಿಕೊಂಡ ಹಳೇ ಆರೋಪಿಗಳ ಬಂಧನ

ತಲೆ ಮರೆಸಿಕೊಂಡ ಹಳೇ ಆರೋಪಿಗಳ ಬಂಧನ

Spread the love

ತಲೆ ಮರೆಸಿಕೊಂಡ ಹಳೇ ಆರೋಪಿಗಳ ಬಂಧನ

ಮಂಗಳೂರು: ನಗರದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣವೊಂದಲ್ಲಿ ಸುಮಾರು ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಮೊದಲನೇ ಆರೋಪಿಯಾದ ಕೆ.ಎ ಇಬ್ರಾಹಿಂ (62),ಮೂಲ್ಕಿ ಆಗಿದ್ದು , ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2002 ನೇ ವರ್ಷದಲ್ಲಿ ಈತನ ಮೇಲೆ ವಂಚನೆ ಪ್ರಕರಣ ದಾಖಲಾಗಿದ್ದು, ನಂತರ  ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡು ವಿದೇಶದಲ್ಲಿದ್ದು, ಆರೋಪಿಯ ಪತ್ತೆಯ ಬಗ್ಗೆ  ನ್ಯಾಯಾಲಯವು ಈತನ ಮೇಲೆ ವಾರಂಟು ಹೊರಡಿಸಿಲಾಗಿತ್ತು .ಇದೀಗ ಮುಲ್ಕಿಗೆ ಬಂದ ಬಗ್ಗೆ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ದಸ್ತಗಿರಿ ಮಾಡಿರುತ್ತಾರೆ.

ಎರಡನೇ ಆರೋಪಿಯಾದ ಹಬೀಬುಲ್ಲಾ (32),  ತಿರುವೈಲ್ ಗ್ರಾಮ, ಮಂಗಳೂರು ಆಗಿದ್ದು , ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2007 ನೇ ವರ್ಷದಲ್ಲಿ ಈತನ ಮೇಲೆ ದೊಂಬಿ ಪ್ರಕರಣ ದಾಖಲಾಗಿದ್ದು, ನಂತರ  ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಯ ಬಗ್ಗೆ  ನ್ಯಾಯಾಲಯವು ಈತನ ಮೇಲೆ ವಾರಂಟು ಹೊರಡಿಸಿಲಾಗಿತ್ತು .ಮುಂದಿನ ಕ್ರಮದ ಬಗ್ಗೆ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ

ಮಂಗಳೂರು ನಗರದ  ಪೊಲೀಸ್ ಆಯುಕ್ತರಾದ  ಸಂದೀಪ್ ಪಾಟೀಲ್ , ಐ.ಪಿ.ಎಸ್. ರವರ ನಿರ್ದೇಶನದಂತೆ,  ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು  ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎ.ಸಿ.ಪಿ. ಯವರು ಮತ್ತು ಸಿಬ್ಬಂದಿಯವರುಗಳು ಪತ್ತೆ ಕಾರ್ಯದಲ್ಲಿ ಬಾಗವಹಿಸಿರುತ್ತಾರೆ.


Spread the love

Exit mobile version