Home Mangalorean News Kannada News ತಾರ್ದೋಳ್ಯ ಕೆರೆ ಅಭಿವೃದ್ದಿಗೆ 50 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ

ತಾರ್ದೋಳ್ಯ ಕೆರೆ ಅಭಿವೃದ್ದಿಗೆ 50 ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ

Spread the love

ತಾರ್ದೋಳ್ಯ ಕೆರೆ ಅಭಿವೃದ್ದಿಗೆ 50  ಲಕ್ಷ ರೂಪಾಯಿ : ಶಾಸಕ ಜೆ.ಆರ್.ಲೋಬೊ

ಮಂಗಳೂರು: ಮಂಗಳೂರಿನ ಪ್ರಮುಖ ಕೆರೆಗಳಾದ ಗುಜ್ಜರ ಕೆರೆ ಮತ್ತು ಬೈರಾಡಿ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ಅವರು ತಾರ್ದೋಳ್ಯ ಕೋರ್ದಬ್ಬು ದೈವಸ್ಥಾನದ ಎರಡುಕೆರೆಗಳನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಣ್ಣನೀರಾವರಿ ಇಲಾಖೆಯಿಂದ ಅಭಿವೃದ್ಧಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಗುಜ್ಜರಕೆರೆ ಮತ್ತು ಬೈರಾಡಿಕೆರೆಗಳನ್ನು ಅಭಿವೃದ್ಧಿ ಪಡಿಸಿ ನೀರಿನ ಅಂತರ್ಜಲವನ್ನು ಹೆಚ್ಚಿಸಲಾಗುವುದು. ಈ ಕೆರೆಗಳ ಅಭಿವೃದ್ಧಿಯ ಜೊತೆಗೆ ಈ ಪರಿಸರವನ್ನು ಕೂಡಾ ಉತ್ತಮಪಡಿಸಲಾಗುವುದು ಎಂದರು.

 ಗುಜಾರಕೆರೆ ಅಭಿವೃದ್ಧಿಗೆ ಸಣ್ಣನೀರಾವರಿ ಇಲಾಖೆಯಿಂದ 1 ಕೋಟಿ ರೂಪಾಯಿ ಮಂಜೂರು ಪಡಿಸಲಾಗಿದೆ. ಈ ಕೆರೆಗೆ ಮಂಗಳಾದೇವಿ ಮತ್ತು ಮಾರಿಗುಡಿಯ ದೇವರು ಜಳಕಮಾಡಲು ಬರುವ ಪರಿಪಾಠವಿದೆ. ಈಗ ಈ ಕೆರೆಗಳಿಗೆ ಒಳಚರಂಡಿ ನೀರು ಹೋಗುತ್ತಿರುವುದರಿಂದ ಮಲಿನವಾಗಿದೆ ಎಂದರು.

ಈ ಕೆರೆಯ ಒಳಚರಂದಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಇದಕ್ಕಾಗಿ 4 ಕೋಟಿ ಖರ್ಚುಮಾಡಲಾಗುತ್ತಿದೆ. ಈ ಕೆರೆ ಸಮರ್ಪಕವಾದ ಕೂಡಲೇ ಮೊದಲಿನಂತೆ ಇಲ್ಲಿ ಜಳಕ ಮಾಡುವುದಕ್ಕೆ ಅನುವಾಗಲಿದೆ ಎಂದರು.

ಇಲ್ಲಿಯ ಕೆರೆಗಳ ಅಭಿವೃದ್ಧಿ ಪಡಿಸಿ ಪರಿಸರದ ಜನರಿಗೆ ಉತ್ತಮ ರೀತಿಯ ಪರ್ಕ್ ಆಗುವಂತೆ ಕೂಡಾ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರಗಳಾದ ಪ್ರವೀಣ್ ಚಂದ್ರ ಆಳ್ವ, ಸುರೇಂದ್ರ, ವಾರ್ಡ್ ಅಧ್ಯಕ್ಷರಾದ ಸುಧಾಕರ ಜೆ, ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷರಾದ ಸದಾನಂದ ಆಳ್ವ, ಅನಿಲ್ ಶೆಟ್ಟಿ, ಕರುಣಾಕರ ಶೆಟ್ಟಿ, ಹರೀಶ್ ಶೆಟ್ಟಿ, ದಿನೇಶ್ ಕುಲಾಲ್, ಸೈಲೇಶ್ ಭಂಡಾರಿ, ಸುಧೀರ್ ಕಡೆಕಾರ್, ಶ್ರೀಧರರಾಜ್ ಶೆಟ್ಟಿ, ರಿಯಾಜ್, ಇಮ್ತಿಯಾಜ್, ಹರ್ಬಟ್ ಡಿಸೋಜ, ಮಹಾಬಲ ಶೆಟ್ಟಿ, ಸುನಿಲ್ ಕುಮಾರ್, ನವೀನ್ ಸ್ಟ್ವೀವನ್, ತಾರಾನಾಥ್ ಭಂಡಾರಿ,, ಗುಡ್ಡೆದ ಗುತ್ತು ಗಣೇಶ್ ಶೆಟ್ಟಿ, ಸಣ್ಣನೀರಾವರಿ ಇಲಾಖೆ ಅಧಿಕಾರಿ ಷಣ್ಮುಗಂ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version