Home Mangalorean News Kannada News ತಾಳಮದ್ದಳೆಯಿಂದ ವಾಕ್ ಶಕ್ತಿ ವೃದ್ಧಿ –  ದಯಾನಂದ ಜಿ.ಕತ್ತಲ್‍ ಸಾರ್

ತಾಳಮದ್ದಳೆಯಿಂದ ವಾಕ್ ಶಕ್ತಿ ವೃದ್ಧಿ –  ದಯಾನಂದ ಜಿ.ಕತ್ತಲ್‍ ಸಾರ್

Spread the love

ತಾಳಮದ್ದಳೆಯಿಂದ ವಾಕ್ ಶಕ್ತಿ ವೃದ್ಧಿ –  ದಯಾನಂದ ಜಿ.ಕತ್ತಲ್‍ ಸಾರ್

‘ಯಕ್ಷಗಾನ ತಾಳಮದ್ದಳೆಯಿಂದ ಮಕ್ಕಳಿಗೆ ಪುರಾಣ ಜ್ಞಾನ ಪ್ರಾಪ್ತಿಯಾಗುತ್ತದೆ. ಮತ್ತು ವಾಕ್ ಶಕ್ತಿ ವೃದ್ದಿಯಾಗುತ್ತದೆ. ಆದ್ದರಿಂದ ಮಕ್ಕಳಿಗೆ ಯಕ್ಷ ನಾಟ್ಯಾಭ್ಯಾಸವನ್ನು ಕಲಿಸಿ ವೇಷಧಾರಿಗಳನ್ನಾಗಿ ಮಾಡುವಂತೆ ಅರ್ಥಧಾರಿಗಳನ್ನಾಗಿಸಿ ಅವರ ಭೌದ್ದಿಕ ಶಕ್ತಿಯನ್ನು ವಿಕಸನಗೊಳ್ಳುವಂತೆ ಮಾಡಬೇಕು’ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಷ್ಣುಮೂರ್ತಿ ಜನಾರ್ಧನ ಯಕ್ಷಗಾನ ಅಧ್ಯಯನ ಕೇಂದ್ರ ಮಂಜನಾಡಿ ಇದರ ಜಂಟಿ ಆಶ್ರಯದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಿರಿ ಚಾವಡಿಯಲ್ಲಿ ಆಯೋಜಿಸಿದ ಮಕ್ಕಳ ತುಳು ಯಕ್ಷಗಾನ ತಾಳಮದ್ದಳೆ ‘ಕುಡಿಯನ ಕೊಂಬಿರೆಲ್’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ದೀಪವನ್ನು ಬೆಳಗಿಸಿದ ನ್ಯಾಯವಾದಿ ಶ್ರೀ ಶ್ರೀಧರ ಶೆಟ್ಟಿ ಪುಲಿಂಚ ಇವರು ‘ಮಕ್ಕಳು ವಿದ್ಯಾವಂತರಾದರೆ ಸಾಲದು, ವಿನಯ ಸಂಪನ್ನರಾಗಬೇಕು. ಈ ರೀತಿ ಯಕ್ಷಗಾನ ಕಲಾ ಅಭ್ಯಾಸದಿಂದ ಹಿರಿಯ ಕಲಾವಿದರ, ಗುರುಗಳ ಸಾಂಗತ್ಯದಿಂದ ಅದು ಸಾಧ್ಯವಾಗುತ್ತದೆ ‘ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ಭರತ್‍ರಾಜ್ ಯುವ ಉದ್ಯಮಿ, ಶ್ರೀ ಉದಯ ಕುಮಾರ್ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು, ಅಯೋಧ್ಯ ಕರ ಸೇವಕರು ಹಾಗೂ ಹೊಸ ದಿಗಂತ ಪತ್ರಿಕೆಯ ಸಂಪರ್ಕ ಪ್ರಮುಖರಾದ ಶ್ರೀ ಚಂದಪ್ಪಣ್ಣ ಇವರಿಗೆ ಅಕಾಡೆಮಿಯ ಪರವಾಗಿ ಸನ್ಮಾನಿಸಲಾಯಿತು.

ಅಕಾಡೆಮಿಯ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಚೇತಕ್ ಪೂಜಾರಿ ಮತ್ತು ನಿಟ್ಟೆ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು. ತಾಳಮದ್ದಳೆಯ ಭಾಗವತರಾಗಿ ಶ್ರೀ ಜಗದೀಶ್ ಗಟ್ಟಿ ಉಚ್ಚಿಲ್, ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದವÀನ್ನು ಶ್ರೀ ಲೋಕಯ್ಯ ಶಿಶಿಲ ಮಾಡಿದರು.


Spread the love

Exit mobile version