Home Mangalorean News Kannada News ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ

ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ

Spread the love

ತೋಟ ಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ

ಮಂಗಳೂರು: ನಗರದ ಸಮೀಪದ ತೋಟ ಬೆಂಗ್ರೆಯಲ್ಲಿ ವಿಹಾರಕ್ಕೆ ತೆರಳಿದ್ದ ಯುವತಿಯೋರ್ವಳನ್ನು ಏಳು ಮಂದಿ ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ದುಷ್ಕೃತ್ಯವು ನ.18ರಂದು ನಡೆದಿದೆ ಎಂದು ತಿಳಿದುಬಂದಿದೆ.  ಯುವತಿ ನ.18ರಂದು  ತೋಟ ಬೆಂಗರೆ ಅಳಿವೆಬಾಗಿಲು ಬೀಚ್‌ಗೆ ತೆರಳಿದ್ದಳೆನ್ನಲಾಗಿದೆ. ಈ ವೇಳೆ  ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ತನ್ನ ಮೇಲೆ ಏಳು ಮಂದಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತ ಯುವತಿ ನಗರ ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ಅಪರಿಚಿತ ಏಳು ಮಂದಿಯ ವಿರುದ್ಧ ಅತ್ಯಾಚಾರ(376 ಡಿ ಸೆಕ್ಷನ್), ಹಲ್ಲೆ(323 ಸೆ.), ಶಾಂತಿಭಂಗ(504 ಸೆ.) ಹಾಗೂ ಬೆದರಿಕೆ (506) ಪ್ರಕರಣ ದಾಖಲಿಸಿಕೊಂಡಿರುವ ನಗರ ಮಹಿಳಾ ಪೊಲೀಸರು ಸ್ಥಳೀಯ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.


Spread the love

Exit mobile version