ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲೂ 18 ವರ್ಷ ಮೇಲ್ಪಟ್ಟ ವಿದೇಶಕ್ಕೆ ಪ್ರಯಾಣಿಸುವರಿಗೆ ಮೊದಲ ಡೋಸ್ ಲಸಿಕೆ‌ ಲಭ್ಯ

Spread the love

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲೂ 18 ವರ್ಷ ಮೇಲ್ಪಟ್ಟ ವಿದೇಶಕ್ಕೆ ಪ್ರಯಾಣಿಸುವರಿಗೆ ಮೊದಲ ಡೋಸ್ ಲಸಿಕೆ‌ ಲಭ್ಯ

ಮಂಗಳೂರು: ವಿದೇಶಕ್ಕೆ ಹೋಗಲಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಲು ಜಿಲ್ಲಾಡಳಿತ ಆದೇಶಿಸಿದೆ.

ಜೂನ್ 14‌ ರ ಸೋಮವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ,ಪ್ರಾಥಮಿಕ ಆರೋಗ್ಯ,ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಧಿಕಾರಿ‌ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

ವಿದೇಶಕ್ಕೆ ಹೋಗಲಿರುವವರು ಅವರ ಪಾಸ್ ಪೋರ್ಟ್,ವಿಸಾ ಅಥವಾ ಪ್ರಯಾಣದ ಟಿಕೇಟನ್ನು ದಾಖಲೆಯಾಗಿ ತೋರಿಸಿ ಅವರ ಗ್ರಾಮದ ಸ್ಥಳೀಯ ಲಸಿಕಾ ಕೇಂದ್ರದಲ್ಲೇ ಮೊದಲ ಆದ್ಯತೆಯ ಮೇರೆಗೆ ಲಸಿಕೆ ಪಡೆಯಲು ಸೂಚಿಸಲಾಗಿದೆ.


Spread the love

1 Comment

  1. Govt.should.add Passport no. on vaccination certificate. All other countries, they add Passport no. on vaccination certificate or issuing vaccination Passport. Adhar no is not valid in gulf countries.

Comments are closed.