Home Mangalorean News Kannada News ದಕ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಓಟ – 186 ಮಂದಿಗೆ ಪಾಸಿಟಿವ್ ದೃಢ

ದಕ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಓಟ – 186 ಮಂದಿಗೆ ಪಾಸಿಟಿವ್ ದೃಢ

Spread the love

ದಕ ಜಿಲ್ಲೆಯಲ್ಲಿ ಮುಂದುವರೆದ ಕೊರೋನಾ ಓಟ – 186 ಮಂದಿಗೆ ಪಾಸಿಟಿವ್ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟವ್ ದೃಢವಾಗುತ್ತಿರುವವರ ಸಂಖ್ಯೆ ಕಳೆದ ಎರಡು ವಾರಗಳಿಂದ ಗರಿಷ್ಠ ಮಟ್ಟದಲ್ಲಿ ಏರಿಕೆ ಯಾಗಿದ್ದು, ಶನಿವಾರ ಒಟ್ಟು 186 ಮಂದಿಯಲ್ಲಿ ಪಾಸಿಟಿವ್ ದೃಢಗೊಂಡಿದೆ.

ಶನಿವಾರ ಪತ್ತೆಯಾದ 186 ಪ್ರಕರಣದಲ್ಲಿ ಪ್ರಾಥಮಿಕ ಸಂಪರ್ಕದಿಂದ 37 ಮಂದಿಗೆ, ಇಲಿ ಯಿಂದ 64, ಸಾರಿ ಯಿಂದ 17, ಅಂತರ್ ರಾಜ್ಯ ಪ್ರಯಾಣದಿಂದ 2, ಅಂತರಾಷ್ಟ್ರೀಯ ಪ್ರಯಾಣದಿಂದ 10, ಪ್ರೀ ಸರ್ಜರಿ ಸ್ಯಾಂಪಲ್ ಟೆಸ್ಟ್ ವೇಲೆ 7, ರಾಂಡಮ್ ಚೆಕ್ಕಿಂಗ್ ವೇಳೆ 13 ಮಂದಿಯಲ್ಲಿ ಹಾಗೂ ಪ್ರೀ ಡೆಲಿವರಿ ಸ್ಯಾಂಪಲ್ ಪರೀಕ್ಷೆಯಲ್ಲಿ 4 ಮಂದಿಗೆ ಪಾಸಿಟಿವ್ ದೃಢಗೊಂಡಿದೆ. ಅಲ್ಲದೆ 32 ಮಂದಿಯ ಟ್ರಾವೆಲ್ ಹಿಸ್ಟರಿಯನ್ನು ಪತ್ತೆಹಚ್ಚಲಾಗುತ್ತಿದೆ.

ಈ ವರೆಗೆ ಒಟ್ಟು 782 ಮಂದಿ ಕೋರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಸದ್ಯ ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 1,2 l I ಸಕ್ರಿಯ ಪ್ರಕರಣಗಳಿವೆ. ಶನಿವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 29 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.


Spread the love

Exit mobile version