Home Mangalorean News Kannada News ದಕ ಜಿಲ್ಲೆಯಲ್ಲಿ 1000 ಸಾವಿರ ಹಾಸಿಗೆಗಳ ಪ್ರಾದೇಶಿಕ ಕೋವಿಡ್ ಹಾಸ್ಪಿಟಲ್ ನಿರ್ಮಾಣಕ್ಕೆ ಮಿಥುನ್ ರೈ ಆಗ್ರಹ

ದಕ ಜಿಲ್ಲೆಯಲ್ಲಿ 1000 ಸಾವಿರ ಹಾಸಿಗೆಗಳ ಪ್ರಾದೇಶಿಕ ಕೋವಿಡ್ ಹಾಸ್ಪಿಟಲ್ ನಿರ್ಮಾಣಕ್ಕೆ ಮಿಥುನ್ ರೈ ಆಗ್ರಹ

Spread the love

ದಕ ಜಿಲ್ಲೆಯಲ್ಲಿ 1000 ಸಾವಿರ ಹಾಸಿಗೆಗಳ ಪ್ರಾದೇಶಿಕ ಕೋವಿಡ್ ಹಾಸ್ಪಿಟಲ್ ನಿರ್ಮಾಣಕ್ಕೆ ಮಿಥುನ್ ರೈ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋಣ ವೈರಸ್ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಜಿಲ್ಲೆಯಲ್ಲಿ 1000 ಸಾವಿರ ಹಾಸಿಗೆಗಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈಯವರು ಜಿಲ್ಲಾಡಳಿವನ್ನು ಮತ್ತು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವೆನ್ಲಾಕ್ ಆಸ್ಪತ್ರೆಯು ನಮ್ಮ ಜಿಲ್ಲೆಯವರೂ ಕೂಡಾ ಅಲ್ಲದೆ ಇತರ ನೆರೆಯ ಕೊಡಗು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ರೋಗಿಗಳು ಆಶ್ರಯಿಸುತ್ತಾ ಬಂದಿದ್ದು ಈಗ ಅದು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡಾಗಿರುವ ಕಾರಣ ಇತರ ಆರೋಗ್ಯ ಸಮಸ್ಯೆಯುಳ್ಳ ರೋಗಿಗಳು ಕಷ್ಟಪಡುವಂತಾಗಿವೆ.

ಅದಲ್ಲದೆ ಬೆಂಗಳೂರಿನಂತೆ ಮಂಗಳೂರಿನಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚೆಚ್ಚು ಬರುತ್ತಿರುವುದರಿಂದ ಇಲ್ಲಿನ ಸರ್ಕಾರಿ ಮತ್ತು ಖಾಸಾಗಿ ಆಸ್ಪತ್ರೆಯ ಹಾಸಿಗೆಗಳು ಕೊರತೆಯಾಗಿ ಇದರ ಪರಿಣಾಮ ಸೋಂಕಿನಿಂದಾಗುವ ಅಪಾಯ ಕೈಮೀರಲಿದ್ದು, ಮುನ್ನೆಚ್ಚರಿಕವಾಗಿ ಅತೀಶ್ರೀಗದಲ್ಲಿ ಕೋವಿಡ್ ಪ್ರಾದೇಶಿಕ ಆಸ್ಪತ್ರೆ ನಿರ್ಮಾಣ ಮಾಡಬೇಕು ಅದೇ ರೀತಿ ಜಿಲ್ಲೆಯಲ್ಲಿ ಸಮೂಹ ತಪಾಸಣೆ ಮಾಡಬೇಕೆಂದು ಮಿಥುನ್ ರೈಯವರು ಆಗ್ರಹಿಸಿದ್ದಾರೆ.


Spread the love

Exit mobile version