ದಸರಾ ಹಿನ್ನೆಲೆ: ಮಂಗಳೂರು- ಬೆಂಗಳೂರು ಮಧ್ಯೆ ವಿಶೇಷ ರೈಲು
ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರಿನಿಂದ ಹೊಸಪೇಟೆ ಮತ್ತು ಮಂಗಳೂರಿಗೆ ಒಂದು ಟ್ರಿಪ್ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಯಶವಂತಪುರ ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸಂಖ್ಯೆ 06257/ 06258 ಸೆ. 30ರಂದು ಯಶವಂತಪುರದಿಂದ ರಾತ್ರಿ 11.55ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅ. 1ರಂದು 2.35ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 11.30ಕ್ಕೆ ಯಶವಂತಪುರ ತಲುಪಲಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.
ಸೆ.26ರಂದು ಮತ್ತು ಸೆ.28ರಂದು ಎಸ್ಎಂವಿಬಿಯಿಂದ ಸಂಜೆ 7 ಗಂಟೆಗೆ ಹೊರಡಲಿರುವ ರೈಲು ಮರುದಿನ ಬೆಳಗ್ಗೆ 4.15ಕ್ಕೆ ಹೊಸಪೇಟೆ ತಲುಪಲಿದೆ. ಹೊಸಪೇಟಿಯಿಂದ ಸೆ.27 ಮತ್ತು ಸೆ.29ರಂದು ರಾತ್ರಿ 8.45ಕ್ಕೆ ಹೊರಡಲಿರುವ ರೈಲು ಬೆಳಗ್ಗೆ 8.10ಕ್ಕೆ ಎಸ್ಎಂವಿಬಿ ತಲುಪಲಿದೆ.
22 ಗಂಟೆಗಳಲ್ಲಿ ಸ್ಲೀಪರ್ ಕೋಚ್ ಬುಕ್!
ಬೆಂಗಳೂರು – ಮಂಗಳೂರು ನಡುವಿನ ದಸರಾ ವಿಶೇಷ ರೈಲಿಗೆ ರೈಲು ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದೆ. 22 ಗಂಟೆಗಳಲ್ಲಿ ಸ್ಲೀಪರ್ ಕೋಚ್ನ ಎಲ್ಲಾ ಸೀಟುಗಳು ಬುಕ್ ಆಗಿದೆ. ಹಬ್ಬದ ಸಮಯದಲ್ಲಿ ಬೆಂಗಳೂರು ಮತ್ತು ಮಂಗಳೂರು ವಿಶೇಷ ರೈಲಿನ ಅಗತ್ಯವಿರುವುದು ಸಾಬೀತಾಗಿದೆ ಎಂದು ರೈಲು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.