Home Mangalorean News Kannada News ದ.ಕ.: ದ್ವೇಷದ ಕೊಲೆ ಪ್ರಕರಣದ ಬಗ್ಗೆ ಕ್ರಮಕ್ಕೆ ಸಿಎಂ ಗೆ ಐವನ್ ಡಿಸೋಜ ಒತ್ತಾಯ

ದ.ಕ.: ದ್ವೇಷದ ಕೊಲೆ ಪ್ರಕರಣದ ಬಗ್ಗೆ ಕ್ರಮಕ್ಕೆ ಸಿಎಂ ಗೆ ಐವನ್ ಡಿಸೋಜ ಒತ್ತಾಯ

Spread the love

ದ.ಕ.: ದ್ವೇಷದ ಕೊಲೆ ಪ್ರಕರಣದ ಬಗ್ಗೆ ಕ್ರಮಕ್ಕೆ ಸಿಎಂ ಗೆ ಐವನ್ ಡಿಸೋಜ ಒತ್ತಾಯ

ಮಂಗಳೂರು: ದ.ಕ. ಜಿಲ್ಲೆಯ.ಲ್ಲಿ ನಡೆಯುತ್ತಿರುವ ದ್ವೇಷದ ಕೊಲೆಗೆ ಸೂಕ್ತ ಕ್ರಮ ಕೈಗೊಂಡು ಕೊಲೆಯ ಹಿಂದಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬುಧವಾರ ಒತ್ತಾಯಿಸಿದ್ದಾರೆ.

ಪಿಕ್ ಅಪ್ ವಾಹನದ ಅಮಾಯಕ ಚಾಲಕ ಅಬ್ದುಲ್ ರಹ್ಮಾನ್ ರನ್ನು ಕೊಲೆ ಮಾಡಿದ ಶಕ್ತಿಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ದ್ವೇಷ ಭಾಷಣ ಮತ್ತು ಪ್ರಚೋದನೆ ನೀಡುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಪ್ರಕರಣ ಮರುಕಳಿಸುವುದನ್ನು ಮಟ್ಟ ಹಾಕಲು ಸಾಧ್ಯವಾಗದು. ಈ ಬಗ್ಗೆ ಆಳವಾದ ತನಿಖೆ ನಡೆಸುವ ಅಗತ್ಯವಿದೆ. ಪೊಲೀಸ್ ಇಲಾಖೆಯ ವೈಫಲ್ಯವೂ ಇದಕ್ಕೆ ಕಾರಣವಾಗಿರುವುದಾಗಿ ಜನಾಭಿಪ್ರಾಯಾಗಿದ್ದು, ಈ ಬಗ್ಗೆಯೂ ಅಗತ್ಯ ಕ್ರಮಗೊಳ್ಳುವಂತೆ ಮುಖ್ಯಮಂತ್ರಿಯನ್ನು ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಈ ಸಂದರ್ಭ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಗೋವಿಂದರಾಜ್ ಉಪಸ್ಥಿತರಿದ್ದರು.

ಮುಖ್ಯಮಂತ್ರಿಯವರು ಗೃಹ ಸಚಿವರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಕ್ತ ಕ್ರಮಕ್ಕೆ ಈ ಸಂದರ್ಭ ನಿರ್ದೇಶನ ನೀಡಿದ್ದಾರೆ ಎಂದು ಐವನ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version