Home Mangalorean News Kannada News ಧರ್ಮಸ್ಥಳ:  ರುಡ್‍ಸೆಟ್ ನೇಷನಲ್ ಎಕಾಡಮಿಯ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಧರ್ಮಸ್ಥಳ:  ರುಡ್‍ಸೆಟ್ ನೇಷನಲ್ ಎಕಾಡಮಿಯ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

Spread the love

ಧರ್ಮಸ್ಥಳ:  ಬೆಂಗಳೂರಿನಲ್ಲಿರುವ ರುಡ್‍ಸೆಟ್ ನೇಷನಲ್ ಎಕಾಡಮಿ ಅಯೋಜಿಸಿದ್ದ 68ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು.

rudset

ಈ ಕಾರ್ಯಕ್ರಮದಲ್ಲಿ ರುಡ್‍ಸೆಟ್ ನೇಷನಲ್ ಎಕಾಡಮಿ ಯ ಅಧ್ಯಕ್ಷರು ಮತ್ತು ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರೂ ಆದ ಪದ್ಮವಿಭೂಷಣ ಡಾ. ಡಿ, ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು ವಿತರಿಸಿ ಆರ್ಶೀವಚನ ನೀಡುತ್ತಾ ರುಡ್‍ಸೆಟ್ ಸಂಸ್ಥೆಯ ಹುಟ್ಟು ಮತ್ತು ಅದರ ಬೆಳವಣಿಗೆಯ ಜೊತೆಗೆ ಕೇಂದ್ರ ಸರಕಾರ ರುಡ್‍ಸೆಟ್ ಸಂಸ್ಥೆಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಿ ಇಂದು ಬ್ಯಾಂಕುಗಳ ಸಹಯೋಗದೊಂದಿಗೆ ಸುಮಾರು 600 ಸ್ವ ಉದ್ಯೋಗ ಕೇಂದ್ರಗಳನ್ನು ತೆರೆದಿದೆ ಎಂದು ರುಡ್‍ಸೆಟ್ ಸಂಸ್ಥೆಗಳ ಯಶೋಗಾತೆಯನ್ನು ವಿವರಿಸಿದರು ಮತ್ತು ತರಬೇತುದಾರರ ಜವಾಬ್ದಾರಿಗಳನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ದೇಶ ದಾದ್ಯಂತ ವಿವಿಧ ರಾಜ್ಯಗಳ ವಿವಿಧ ಬ್ಯಾಂಕುಗಳಿಂದ ಪ್ರಾಯೋಜಿಸಲ್ಪಟ್ಟ ಆರ್‍ಸೆಟಿ ಸಂಸ್ಥೆಗಳ ಉಪನ್ಯಾಸಕರುಗಳು ಬಾಗವಹಿಸಿದ್ದರು. ಇಲ್ಲಿಯ ವರೆಗೆ ರುಡ್‍ಸೆಟ್ ನೇಷನಲ್ ಎಕಾಡಮಿ ಸುಮಾರು 2300 ತರಬೇತುದಾರಿಗೆ ತರಬೇತಿ ನೀಡಿದೆ.


Spread the love

Exit mobile version