Home Mangalorean News Kannada News ಧರ್ಮ ನಿರಾಪೇಕ್ಷತೆ ಭಾರತದ ಸಂವಿಧಾನದ ಶ್ರೇಷ್ಟ್ರತೆ – ಡಾ| ಆಶಾಲತಾ ಪಿ.

ಧರ್ಮ ನಿರಾಪೇಕ್ಷತೆ ಭಾರತದ ಸಂವಿಧಾನದ ಶ್ರೇಷ್ಟ್ರತೆ – ಡಾ| ಆಶಾಲತಾ ಪಿ.

Spread the love

ಧರ್ಮ ನಿರಾಪೇಕ್ಷತೆ ಭಾರತದ ಸಂವಿಧಾನದ ಶ್ರೇಷ್ಟ್ರತೆ – ಡಾ| ಆಶಾಲತಾ ಪಿ.

ಉಡುಪಿ: ಸಮಾನತೆ ಮತ್ತು ಭಾತೃತ್ವದ ನೆಲೆಗಟ್ಟಿನ ಮೇಲೆ ನಿರ್ಮಿಸಲ್ಪಟ್ಟ ನಮ್ಮ ಸಂವಿಧಾನವು ವಿಶ್ವಕ್ಕೆ ಮಾದರಿ. ಮಾನವ ಜನಾಂಗದ ಹಕ್ಕಿಗಾಗಿ ಹೋರಾಡಿದ ಮಹಾ ಮಾನವತಾವಾದಿ ಡಾ| ಅಂಬೇಡ್ಕರ್‍ರವರು, ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರು ನಂಬಿದಂತಹ ಸೆಕ್ಯೂಲರ್ ವಿಚಾರಧಾರೆಗೆ ಅನುಗುಣವಾಗಿ ಸಂವಿಧಾನವನ್ನು ರಚಿಸಿದರು. ಸಂವಿಧಾನದ ಪೂರ್ವ ಪೀಠಿಕೆ ನೆಹರೂರವರ ಚಿಂತನೆ. ಸಂವಿಧಾನದಲ್ಲಿ ಅಳವಡಿಸಲಾದ ಮೂಲಭೂತ ಹಕ್ಕುಗಳು ಅಮೇರಿಕಾದ ಸಂವಿಧಾನದಿಂದ ಪ್ರೇರೇಪಿತವಾದವು. ಪ್ರಜಾಸತ್ತಾತ್ಮಕ ಸಮಾಜವಾದ ತತ್ವ್ವಗಳು ಮೂಲಭೂತ ಹಕ್ಕುಗಳು ಎಂದಿಗೂ ಅಭಾದಿತವಾಗಿ ಉಳಿಯುವಂತೆ ಕಾನೂನುಗಳನ್ನು ರೂಪಿಸಿ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಭಾರತ ಸಂವಿಧಾನದಲ್ಲಿ ಅಳವಡಿಸಲಾದ ವಿಚಾರಗಳು ಚಿಂತನೆಗಳು ಮೌಲಿಕ ವಾದುವು ಮತ್ತು ಸರ್ವಕಾಲಿಕವಾದವು ಎಂದು ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ| ಆಶಾಲತಾ ಪಿ. ರವರು ಹೇಳಿದರು.

ಅವರು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಆಶ್ರಯದಲ್ಲಿ ಇಂದು ಉಡುಪಿ ಕಾಂಗ್ರೆಸ್ ಭವನದ ಇಂದಿರಾ ಗಾಂಧಿ ವೇದಿಕೆಯಲ್ಲಿ ಜರಗಿದ ಸಂವಿಧಾನ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು. ಅವರು ಮುಂದುವರಿಯುತ್ತಾ ಆರ್ಟಿಕಲ್ 32 ಸಂವಿಧಾನದ ಆತ್ಮ ಎಂದು ಬಿ.ಆರ್. ಅಂಬೇಡ್ಕರ್ ಅಂದಿದ್ದರು. ಏಕೆಂದರೆ ಸಂವಿಧಾನ ಹಕ್ಕನ್ನು ಪ್ರಭುತ್ವ ಉಲ್ಲಂಘನೆ ಮಾಡಿದಾಗ ಅದನ್ನು 32ನೇ ಆರ್ಟಿಕಲ್ ನೋಡಿಕೊಳ್ಳುತ್ತದೆ. ಈ ವಿಧಿ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟಿಗೆ ಕೊಟ್ಟಿದೆ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಡಾ| ಬಾಬು ರಾಜೇಂದ್ರ ಪ್ರಸಾದ್ ಆಗಿದ್ದರು, ಕರಡು ಸಮಿತಿ ಅಧ್ಯಕ್ಷರು ಬಿ.ಆರ್ ಅಂಬೇಡ್ಕರ್ ಆಗಿದ್ದರು. ನವೆಂಬರ್ 26, 1949ರಲ್ಲಿ ನಮಗೆ ನಾವೇ ಅರ್ಪಣೆ ಮಾಡಿಕೊಂಡ ಸಂವಿಧಾನ, ಸಂವಿಧಾನ ಸಭೆಯ ಒಂದು ಪ್ರೊಡಕ್ಟ್ ಆದರೂ ಅಂಬೇಡ್ಕರ್ ಹಾಗೂ ನೆಹರೂರವರ ಚಿಂತನೆಯ ಫಲಶ್ರುತಿ. ಭಾರತದ ಸಂವಿಧಾನದ ಶ್ರೇಷ್ಟತೆಯ ಬಗ್ಗೆ ಹೇಳಿದ ಅವರು ಸಂವಿಧಾನವನ್ನು ಭಾರತೀಯರು ಯಾಕೆ ಓದಬೇಕು ಎನ್ನುವ ಬಗ್ಗೆ ಹಾಗೂ ಸಂವಿಧಾನದಲ್ಲಿ ಅಳವಡಿಸಲಾದ ಕರ್ತವ್ಯಗಳು ಹಾಗೂ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ನಾವು ಸಂವಿಧಾನವನ್ನು ಮತ್ತೆ ಮತ್ತೇ ಓದೋಣ. ಸಂವಿದಾನದ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ನೋಡುಕೊಳ್ಳುವ ಅಗತ್ಯತೆ ಇಂದಿನ ಸಂದರ್ಭದಲ್ಲಿದೆ ಎಂದರು.

ಉಪನ್ಯಾಸವನ್ನು ಕೆಪಿಸಿಸಿ ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೇಲಿಯೋ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನೆರವೇರಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ನರಸಿಂಹ ಮೂರ್ತಿ, ಉದ್ಯಾವರ ನಾಗೇಶ್ ಕುಮಾರ್, ರೆ.ಫಾ.ವಿಲಿಯಂ ಮಾರ್ಟಿಸ್, ಪ್ರೊ. ಸಿರಿಲ್ ಮಥಾಯಸ್, ದಿನೇಶ್ ಕೋಟ್ಯಾನ್, ಡಾ. ಸುನೀತಾ ಶೆಟ್ಟಿ, ಸೂರ್ಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕರಾದ ರೋಶನಿ ಒಲಿವರ್‍ರವರು ಸ್ವಾಗತಿಸಿದರು, ಕಾರ್ಯಕರ್ತ ಬಿ.ಕೆ ಸೋಮನಾಥ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಸಿದರು. ವೈ.ಬಿ. ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.


Spread the love

Exit mobile version