Home Mangalorean News Kannada News ನಮ್ಮ ಬೀಟ್, ನಮ್ಮ ಹೆಮ್ಮೆಗೆ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಚಾಲನೆ

ನಮ್ಮ ಬೀಟ್, ನಮ್ಮ ಹೆಮ್ಮೆಗೆ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಚಾಲನೆ

Spread the love

‘ನಮ್ಮ ಬೀಟ್, ನಮ್ಮ ಹೆಮ್ಮೆ’ ಗೆ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಚಾಲನೆ

ಮಂಗಳೂರು : ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ ‘ನಮ್ಮ ಕುಡ್ಲ ಪೊಲೀಸ್’ ವಾಟ್ಸ್ ಆಯಪ್ ಗ್ರೂಪ್ ‘ಮೈ ಬೀಟ್ ಮೈ ಪ್ರೈಡ್’ (ನಮ್ಮ ಬೀಟ್, ನಮ್ಮ ಹೆಮ್ಮೆ)ಗೆ ಶುಕ್ರವಾರ ಆಯುಕ್ತಾಲಯದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ ಅವರು ನನ್ನ ಗಸ್ತು ನನ್ನ ಹೆಮ್ಮೆ ಈ ಯೋಜನೆಯ ವೈಶಿಷ್ಟ್ಯತೆ ಏನೆಂದರೆ ಈ ಇಡೀ ನಗರವನ್ನು ಚಿಕ್ಕದಾಗಿ ಬೀಟ್ ಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ಬೀಟ್ ಗೆ ಒಬ್ಬ ಕಾನ್ಸ್ ಟೇಬಲ್ ಅಥವಾ ಹೆಡ್ ಕಾನ್ ಸ್ಟೇಬಲ್ ಅವರನ್ನು ನೇಮಿಸಲಾಗಿರುತ್ತದೆ. ಹಾಗೆಯೇ ಪ್ರತಿ ಬೀಟ್ ಗೆ ಒಂದು ವಾಟ್ಸಾಪ್ ಗೂಪ್ ರಚಿಸಿ ಅದರಲ್ಲಿ ನಾಗರಿಕ ಸಮಾಜದ ಎಲ್ಲಾ ವರ್ಗದ, ಎಲ್ಲಾ ಜಾತಿ ಎಲ್ಲಾ ಸಮುದಾದಯ ಹಾಗೂ ಎಲ್ಲಾ ವಯಸ್ಸಿನ ಜವಾಬ್ದಾರಿಯ ನಾಗರಿಕರನ್ನು ಸದಸ್ಯರನ್ನಾಗಿ ನೋಂದಾಣಿಸಿ ದಿನಂಪ್ರತಿ ಅವರಿಂದ ಸಲಹೆ ಸೂಚನೆ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯನ್ನಾಗಿ ಈ ವಾಟ್ಸಾಪ್ ಗ್ರೂಪನ್ನು ಬಳಸಲಾಗುತ್ತದೆ.

ಈ ಯೋಜನೆಯ ಮತ್ತೊಂದು ವೈಶಿಷ್ಟ್ಯೆತೆ ಏನೆಂದರೆ ಸಂಬಂಧಪಟ್ಟ ಬೀಟ್ ಕಾನ್ಸ್ ಟೇಬಲ್ ಜೊತೆಗೂಡಿ ಮಂಗಳೂರು ನಗರ ಆಯುಕ್ತಾಲಯದ ಎಲ್ಲಾ ವರಿಷ್ಟ ಪೊಲೀಸ್ ಅಧಿಕಾರಿಗಳು ಮಂಗಳೂರು ನಗರ ಕಮೀಷನರ್ ಅವರನ್ನು ಒಳಗೊಂಡಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವರೆಗೆ ತಿಂಗಳಿಗೊಂದು ದಿನ ಒಂದು ಬೀಟ್ನ ಕರ್ತವ್ಯವನ್ನು ಈ ಹಿರಿಯ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಇದರಿಂದ ಹಿರಿಯ ಅಧಿಕಾರಿಗಳಿಗೆ ಸಹ ಸ್ಥಳೀಯವಾದ ಸಮಸ್ಯೆಗಳ ನೇರ ಪರಿಚಯ ಆಗುವುದಲ್ಲದೆ ಸ್ಥಳೀಯರ ಪ್ರತಿಯೊಂದು ವಿಚಾರದ ಬಗ್ಗೆ ನಿಲುವುಗಳನ್ನು ತಿಳಿದುಕೊಂಡು ಪೊಲೀಸ್ ಸೇವೆಗಳನ್ನು ಹೆಚ್ಚು ಸಮಂಜಸವಾಗಿ ಜನರಿಗೆ ಸಲ್ಲಿಸುವಲ್ಲಿ ಸಹಕಾರಿಯಾಗಲಿದೆ.

ಈ ವೈಶಿಷ್ಟ್ಯವುಳ್ಳ ಈ ಹೊಸ ಬೀಟ್ ವ್ಯವಸ್ಥೆಯಿಂದ ಜನರಿಗೆ ಪಾಸ್ ಪೋರ್ಟ್ ವೆರಿಫಿಕೇಶನ್ ಕೆಲಸಗಳ ಕುರಿತಾದ ವೆರಿಫಿಕೇಶನ್ ಮುಂತಾ ದಪೊಲೀಸ್ ಸೇವೆಗಳನ್ನು ಪಡೆಯುವಲ್ಲಿ ಹೆಚ್ಚಿನ ಸಹಾಯ ಸಿಗಲಿದೆ.

ಸ್ಥಳೀಯ ಬೀಟ್ ಮುಖ್ಯಸ್ಥ ಕಾನ್ಸ್ ಟೇಬಲ್ ಅಥವಾ ಹೆಡ್ ಕಾನ್ಸ್ ಟೇಬಲ್ ಅವರು ಈ ಸೇವೆಗಳನ್ನ ನೇರವಾಗಿ ನಾಗರಿಕರ ಬಾಗಿಲಿಗೆ ತಲುಪಿಸುವಲ್ಲಿ ಈ ಒಂದು ಹೊಸ ಯೋಜನೆ ಸಹಕಾರಿಯಾಗಲಿದೆ.

ಹಾಗಾಗಿ ಹೆಚ್ಚು ಹೆಚ್ಚು ಜನ ಈ ಹೊಸ ಯೋಜನೆಗೆ ಕೈ ಜೋಡಿಸಿದ್ದಲ್ಲಿ ಅತ್ಯಂತ ಸಮರ್ಪಕವಾಗಿ ನಗರ ವ್ಯಾಪ್ತಿಯ ಪೊಲೀಸ್ ಸೇವೆಗಳನ್ನು ಒದಗಿಸುವಲ್ಲಿ ನಗರ ಪೊಲೀಸರಿಗೆ ಸಹಕಾರಿಯಾಗುತ್ತದೆ.


Spread the love

Exit mobile version