ನಾಡಾ ಐಟಿಐ ಕಾಲೇಜು ಪ್ರವೇಶಕ್ಕೆ ಸೆ.30 ವರೆಗೆ ದಿನಾಂಕ ವಿಸ್ತರಣೆ
ಕುಂದಾಪುರ: ವಿವಿಧ ರಾಜ್ಯಗಳ ಕೋರಿಕೆಯ ಮೇರೆಗೆ ಐಟಿಐ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಸೀಟುಗಳ ಭರ್ತಿಗಾಗಿ ಸೆ.30 ವರೆಗೆ ದಿನಾಂಕ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಮಾಡಿದೆ ಎಂದು ನಾಡಾ ಐಟಿಐ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಡಾದಲ್ಲಿನ ರೇ.ಫಾ.ರೋಬರ್ಟ್ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗೆ 2025-26ನೇ ಸಾಲಿನ ಪ್ರವೇಶಾವಕಾಶ ಬಯಸುವ ಆರ್ಹ ಅಭ್ಯರ್ಥಿಗಳು ಸೆ.26ರ ಒಳಗೆ, ಸರ್ಕಾರದ ನಿಯಮಾವಳಿಗಳಂತೆ ದಾಖಲೆಗಳೊಂದಿಗೆ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸಂಸ್ಥೆಯಲ್ಲಿ ದೆಹಲಿಯ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿಯಿಂದ ( ಎನ್‌ಸಿವಿಟಿ ) ಶಾಶ್ವತ ಸಂಯೋಜನೆ ಪಡೆದುಕೊಂಡಿರುವ ಎರಡು ವರ್ಷ ಅವಧಿಯ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ( ಎಂಎಂವಿ), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರೀಷಿಯನ್ ಹಾಗೂ ಒಂದು ವರ್ಷ ಅವಧಿಯ ಮೆಕ್ಯಾನಿಕ್ ಡಿಸೇಲ್ (ಆಟೋಮೊಬೈಲ್) ಕೋರ್ಸುಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದ್ದು, ಸರ್ಕಾರದ ಮೀಸಲಾತಿಯಂತೆ ಅಭ್ಯರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುವುದು.
ಆಸಕ್ತರು ಖುದ್ದಾಗಿ ಸಂಸ್ಥೆಗೆ ಬಂದು ಮಾಹಿತಿ ಪಡೆದುಕೊಳ್ಳಬಹುದು ಅಥವಾ ದೂರವಾಣಿ ಸಂಖ್ಯೆ 9113234392 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.