ನಾರಾಯಣ ಗುರು ವೃತ್ತ ಏಕಾಏಕಿ ತೆರವು ಮಾಡಿರುವುದು ಅತ್ಯಂತ ಖಂಡನೀಯ – ರಮೇಶ್ ಕಾಂಚನ್
ಉಡುಪಿ: ನಗರಸಭೆ ಯಿಂದ ಕಾನೂನುಬದ್ಧವಾಗಿ ನಿರ್ಮಾಣಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ತೆರವುಗೊಳಿಸಿ ಪಾಳುಬಿದ್ದರುವ ಜಾಗದ ಪೊದೆಗಳ ಮಧ್ಯೆ ಬಿಸಾಡಿರುವುದು ಅತ್ಯಂತ ಖಂಡನೀಯ. ಶೋಷಿತ ವರ್ಗದವರಿಗೆ ಗೌರವಯುತ ಬದುಕಿನ ದಾರಿ ತೋರಿದ ಮಾರ್ಗದರ್ಶಿ,ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳಿಗೆ ಅಗೌರವ ತೋರಿದ ತಪ್ಪಿತಸ್ಥರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ
ಹಾಗೆಯೇ ನಾರಾಯಣ ಗುರುಗಳ ವೃತವನ್ನು ತೆರವುಗೊಳಿಸಿರುವುದರ ವಿರುದ್ಧ ಬಿಲ್ಲವ ಯುವ ವೇದಿಕೆಯವರು,ಬಿಲ್ಲವ ಸಮುದಾಯದ ಮುಂದಾಳುಗಳು, ಒಗ್ಗಟ್ಟಾಗಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿ ನಾರಾಯಣ ಗುರು ವೃತ್ತವನ್ನು ಮರು ಸ್ಥಾಪಿಸುವ ತನಕ ಸಂಘಟಿತ ಹೋರಾಟವನ್ನು ನಡೆಸಿರುವುದು ಬಹಳ ಶ್ಲಾಘನೀಯ
2014ರಸಾಲಿನಲ್ಲಿ ಉಡುಪಿ ನಗರಸಭೆಯ ಅಂದಿನ ಅಧ್ಯಕ್ಷರಾದ ಯುವರಾಜ್ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬನ್ನಂಜೆಯಲ್ಲಿ ನಾರಾಯಣ ಗುರು ವೃತ್ತ ನಿರ್ಮಿಸಲು ಸರ್ವಾನುಮತದಿಂದ ಅನುಮೋದನೆ ನೀಡಲಾಗಿತ್ತು.
ಹೀಗೆ ನಾರಾಯಣ ಗುರುಗಳ ವಿಚಾರದಲ್ಲಿ ಬಿಲ್ಲವ ಯುವ ವೇದಿಕೆ,ಬಿಲ್ಲವ ಸಮುದಾಯದ ಮುಂದಾಳುಗಳು ಹಾಗೂ ನಾರಾಯಣ ಗುರುಗಳ ಅನುಯಾಯಿಗಳು ಕೈ ಗೊಳ್ಳುವ ಕೆಲಸ ಕಾರ್ಯಗಳಿಗೆ ಮನಃಪೂರ್ವಕವಾಗಿ ಸಹಕರಿಸುವುದಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.