ನಾಳೆ (ಜ.10) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಕ ಜಿಲ್ಲೆಗೆ
ಮಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜನವರಿ 10 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.
ಜನವರಿ 10 ರಂದು ಬೆಳಿಗ್ಗೆ 9:5- ಮಂಗಳೂರು ವಿಮಾನ ನಿಲ್ದಾಣ ಆಗಮನ, ಮಧ್ಯಾಹ್ನ 12 – ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಮಾವೇಶದ ಪೂರ್ವಭಾವಿ ಸಭೆ (ಹೋಟೆಲ್ ಅವತಾರ್, ಅತ್ತಾವರ), 5:30- ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಮಾವೇಶ ಕಾರ್ಯಕ್ರಮ, 7- ನರಿಂಗಾಣದಲ್ಲಿ ಲವಕುಶ ಜೋಡುಕರೆ ಕಂಬಳ ಕಾರ್ಯಕ್ರಮ, ರಾತ್ರಿ 8:30- ಕುಂಡೂರು ಜಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ, ರಾತ್ರಿ ನಗರದಲ್ಲಿ ವಾಸ್ತವ್ಯ ಮಾಡಲಿದ್ದು ಜನವರಿ 11 ರಂದು ಬೆಳಿಗ್ಗೆ 11:20- ಉಪಮುಖ್ಯಮಂತ್ರಿಗಳು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
