ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದೇಶ ವಿರೋಧಿ ಬರಹ ಘಟನೆ: ಜಿಲ್ಲಾ ಎನ್ ಎಸ್ ಯು ಐ ಸ್ಪಂದನೆ
ಉಡುಪಿ: ಕಾರ್ಕಳ ತಾಲೂಕಿನ ಪ್ರತಿಷ್ಠಿತ ನಿಟ್ಟೆ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ಆವರಣಲ್ಲಿನ ಹುಡುಗಿಯರ ಶೌಚಾಲಯದ ಗೋಡೆಗಳ ಮೇಲೆ ಬರೆದಿರುವ ಧರ್ಮ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಬರಹಗಳ ಕುರಿತು ಉಡುಪಿ ಜಿಲ್ಲಾ ರಾಷ್ಟ್ರೀಯ ವಿದ್ಯಾರ್ಥಿ ಸಂಘ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಈ ಘಟನೆಯ ಮಾಹಿತಿ ಪಡೆದ ಕೂಡಲೇ NSUI ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಜಿಲ್ಲೆ ಉಪಾಧ್ಯಕ್ಷ ಕಣಿಶ್ಕ್ ಹೆಗ್ಡೆ, ಕಾರ್ಕಳ ವಿಧಾನಸಭೆ ಅಧ್ಯಕ್ಷ ಗುರುದೀಪ್ ಶೆಟ್ಟಿ ಮತ್ತು ದೀಕ್ಷಿತ್ ಶೆಟ್ಟಿ ತಕ್ಷಣ ಸಂಸ್ಥೆಯನ್ನು ಭೇಟಿ ಮಾಡಿ ಕಾಲೇಜಿನ ಪ್ರಾಂಶುಪಾಲರೊಂದಿಗೆ ಚರ್ಚೆ ನಡೆಸಿದರು. ಕಾಲೇಜು ಅಧಿಕಾರಿಗಳು ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಬಗ್ಗೆ ಈಗಾಗಲೇ ನಿಟ್ಟೆ ವಿದ್ಯಾ ಸಂಸ್ಥೆ ಪೊಲೀಸರಿಗೆ ದೂರು ನೀಡಿದ್ದು ಮತ್ತು ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗೆ ಕೂಡ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿದೆ ಮತ್ತು ವಿವರಿಸಲಾಗಿದೆ ಎಂದು ಸಂಸ್ಥೆಯವರು ಮಾಹಿತಿ ನೀಡಿದರು.
ಇಲಾಖೆಯ ಅಧಿಕಾರಿಗಳು ಈಗಾಗಲೇ ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು ಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಕೂಡಲೇ ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು NSUI ಗೆ ಭರವಸೆ ನೀಡಿದ್ದಾರೆ.
NSUI ಪೊಲೀಸ್ ಇಲಾಖಾಧಿಕಾರಿಗಳ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ದು ನ್ಯಾಯ ದೊರಕಿಸುವಲ್ಲಿ ಕಟಿಬದ್ಧವಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಶಾಂತಿಯಿಂದ ಧೈರ್ಯದಿಂದ ಇರುವಂತೆ ವಿನಂತಿ ಮಾಡುತ್ತೇವೆ. NSUI ಶಾಂತಿ, ಏಕತೆ ಮತ್ತು ನಮ್ಮ ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಬದ್ಧವಾಗಿದೆ.