Home Mangalorean News Kannada News ನಿರ್ಭಯಾ ಗ್ಯಾಂಗ್ ರೇಪ್: ನಾಲ್ವರು ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಜಾರಿ

ನಿರ್ಭಯಾ ಗ್ಯಾಂಗ್ ರೇಪ್: ನಾಲ್ವರು ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಜಾರಿ

Spread the love

ನಿರ್ಭಯಾ ಗ್ಯಾಂಗ್ ರೇಪ್: ನಾಲ್ವರು ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಜಾರಿ

ನವದೆಹಲಿ: ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ್ದ ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳ ಕುತ್ತಿಗೆಗೆ ಸೂರ್ಯೋದಯಕ್ಕೂ ಮುನ್ನವೇ ಕುಣಿಕೆ ಬಿದಿದ್ದೆ. ಆ ಮೂಲಕ ಏಳು ವರ್ಷಗಳ ಬಳಿಕ ನಿರ್ಭಯಾ ಸಾವಿಗೆ ನ್ಯಾಯ ಸಿಕ್ಕಿದೆ.

ಅಪರಾಧಿಗಳಾದ ವಿನಯ್ ಕುಮಾರ್, ಅಕ್ಷಯ್ ಠಾಕೂರ್ ಮತ್ತು ಮುಕೇಶ್ ಸಿಂಗ್ ಹಾಗೂ ಪವನ್ ಗುಪ್ತಾ ಕೊನೆಯವರೆಗೂ ಕಾನೂನು ಹೋರಾಟ ನಡೆಸಿದರೂ ಸಾವಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ಮುಂಜಾನೆ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಗಿದೆ.ಇದರೊಂದಿಗೆ ಏಳು ವರ್ಷಗಳಿಂದ ನಡೆದ ಬೃಹನ್ನಾಟಕಕ್ಕೆ ತೆರೆ ಬಿದ್ದಿದೆ.

ನಾಲ್ಕು ಬಾರಿ ಡೆತ್ ವಾರೆಂಟ್ ಪಡೆದರೂ ಗಲ್ಲು ಶಿಕ್ಷೆ ರದ್ದುಪಡಿಸಬೇಕೆಂದು ಸುಪ್ರೀಂಕೋರ್ಟ್, ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಆದರೆ, ಎಲ್ಲಾ ಕಡೆಗಳಲ್ಲಿ ಅರ್ಜಿ ವಜಾಗೊಂಡು ಇಂದು ಕೊನೆಯ ಉಸಿರೆಳೆದಿದ್ದಾರೆ.

ನೇಣುಗಂಬವೇರಿಸುವ ಮುನ್ನ ತಿಹಾರ್ ಜೈಲಿನ ಆರೋಗ್ಯಾಧಿಕಾರಿಗಳಿಂದ ನಾಲ್ವರು ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಂತರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಅಪರಾಧಿಗಳ ಅಂತಿಮ ಇಚ್ಚೆಯನ್ನು ಕೇಳಲಾಗಿದೆ. ಆದರೆ, ಅಂತಿಮ ಇಚ್ಚೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಕಪ್ಪು ಬಟ್ಟೆ ಧರಿಸಿದ ಕೈದಿಗಳನ್ನು ವಾರ್ಡನ್ ಹಾಗೂ ಹೆಡ್ ವಾರ್ಡನ್ ಗಲ್ಲು ಕೋಣೆಗೆ ಕರೆತಂದಿದ್ದು, ಡೆತ್ ವಾರೆಂಟ್ ಗೆ ಮ್ಯಾಜಿಸ್ಟ್ರೇಟ್ ಸಹಿ ಹಾಕಿದ್ದಾರೆ.ಅಪರಾಧಿಗಳ ಎದುರು ವಾರೆಂಟ್ ಓದಿದ ನಂತರ ಅವರಿಗೆ ಗಲ್ಲು ಶಿಕ್ಷೆ ಜಾರಿ ಮಾಡಲಾಗಿದೆ. ಬಳಿಕ ಗಲ್ಲಿಗೇರಿಸಿದ ಅರ್ಧಗಂಟೆಯ ಬಳಿಕ ಅಪರಾಧಿಗಳ ಸಾವನ್ನ ವೈದ್ಯರು ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಖೈದಿಗಳ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.


Spread the love

Exit mobile version