Home Mangalorean News Kannada News `ನೀರು ಉಳಿಸಿ- ಜೀವ ಉಳಿಸಿ’ ಘೋಷಣೆಯೊಂದಿಗೆ ಬೃಹತ್ ಸೈಕಲ್‍ರ್ಯಾಲಿ

`ನೀರು ಉಳಿಸಿ- ಜೀವ ಉಳಿಸಿ’ ಘೋಷಣೆಯೊಂದಿಗೆ ಬೃಹತ್ ಸೈಕಲ್‍ರ್ಯಾಲಿ

Spread the love

`ನೀರು ಉಳಿಸಿ- ಜೀವ ಉಳಿಸಿ’ ಘೋಷಣೆಯೊಂದಿಗೆ ಬೃಹತ್ ಸೈಕಲ್‍ರ್ಯಾಲಿ
ಮಂಗಳೂರು: ವಿಜಯವಾಣಿ, ದಿಗ್ವಿಜಯ ನ್ಯೂಸ್, ಆರ್‍ಎಕ್ಸ್‍ಲೈಫ್ ಆಶ್ರಯದಲ್ಲಿ `ನೀರು ಉಳಿಸಿ- ಜೀವ ಉಳಿಸಿ’ ಎಂಬ ಘೋಷಣೆಯೊಂದಿಗೆ ಭಾನುವಾರ ನಗರದಲ್ಲಿ ಬೃಹತ್ ಸೈಕಲ್‍ರ್ಯಾಲಿ ನಡೆಯಿತು
ಮುಂಜಾನೆಯ ಚುಮು ಚುಮು ಚಳಿಯಲ್ಲಿ 3ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಬೀದಿಗಳಲ್ಲಿ ಪೆಡಲï ತುಳಿಯುತ್ತಾ ಜಲಜಾಗೃತಿ ಮೂಡಿಸಿದರು. ಬೆಳಗ್ಗೆ 6.30ಕ್ಕೆ ನಗರದ ಲೇಡಿಹಿಲï ವೃತ್ತದಿಂದ ಆರಂಭವಾದ ರ್ಯಾಲಿ ಕುಳೂರು-ಕೆಐಒಸಿಎಲ್-ತಣ್ಣೀರು ಬಾವಿ ವರೆಗೆ ಸಾಗಿತು. ಅಲ್ಲಿಂದ ಹಿಂತಿರುಗಿದ ಸೈಕಲ್ ಸವಾರರು ಕೊಟ್ಟಾರ- ಬಾರೇಬೈಲ್- ಕುಂಟಿಕಾನ- ಕೆಎಸ್‍ಆರ್‍ಟಿಸಿ- ಲಾಲ್‍ಬಾಗ್-ಲೇಡಿಹಿಲ್-ಉರ್ವಮಾರ್ಕೆಟ್ ಮೂಲಕ 22ಕಿ.ಮೀ.ಕ್ರಮಿಸಿ ಬೋಳೂರು ಮಾತಾ ಅಮೃತಾನಂದಾಮಯಿ ವಿದ್ಯಾಲಯದಲ್ಲಿ ರ್ಯಾಲಿ ಸಂಪನ್ನಗೊಳಿಸಿದರು. 10 ವರ್ಷದಿಂದ ಮೇಲ್ಪಟ್ಟ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 87ರ ವಯೋ ವೃದ್ಧರು ಪಾಲ್ಗೊಂಡಿದ್ದರು. ವಿಶೇಷ ಆಕರ್ಷಣೆಯಾಗಿ ನೆದಲ್ರ್ಯಾಂಡ್ ಪ್ರಜೆ ಹಾಸ್ಕೋ ಭಾಗವಹಿಸಿದ್ದರು. 7 ಮಂದಿ ಅದೃಷ್ಟಶಾಲಿ ಮಕ್ಕಳಿಗೆ ಸೈಕಲನ್ನು ಬಹುಮಾನವಾಗಿ ನೀಡಲಾಯಿತು.
ವಿಕಾಸ್ ಪಿಯು ಕಾಲೇಜಿನ ಪ್ರಮುಖ ಪ್ರಾಯೋಜಕತ್ವ ದಲ್ಲಿ ನಡೆದ ರ್ಯಾಲಿಗೆ ವಿಕಾಸ್ ಕಾಲೇಜಿನ ಪ್ರಮುಖ ಪ್ರಾಯೋಜಕತ್ವದಲ್ಲಿ ನಡೆದ ರ್ಯಾಲಿಗೆ ಮಂಗಳಾಸ್ಟೇಡಿಯಂ ಎದುರಿನ ರಸ್ತೆಯಲ್ಲಿ ಮಾಜಿ ಸಚಿವ ಹಾಗೂ ವಿಕಾಸ್ ಸಂಸ್ಥೆಗಳ ಅಧ್ಯಕ್ಷ ಕೃಷ್ಣ ಜೆ.ಪಾಲೇಮಾರ್ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ನಗರ ಪೆÇಲೀಸ್ ಆಯುಕ್ತ ಟಿ.ಆರ್. ಸುರೇಶ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್, ಐಡಿಯಲ್ ಐಸ್‍ಕ್ರೀಂ ವ್ಯವಸ್ಥಾಪಕ ನಿರ್ದೇಶಕ ಮುಕುಂದ ಕಾಮತ್, ವಿಕಾಸ್ ಎಜು ಸೊಲ್ಯೂಷನ್ ನಿರ್ದೇಶಕ ಡಾ. ಅನಂತ ಪ್ರಭು, ಬಿಜೆಪಿ ನಗರ ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್, ವಿಜಯವಾಣಿ ಸಂಪಾದಕ ಕೆ.ಎನ್.ಚೆನ್ನೇಗೌಡ, ವಿಜಯವಾಣಿ ಉಪಾಧ್ಯಕ್ಷ ಕೆ.ಆರ್.ಅರುಣ್, ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ವಾಗ್ಳೆ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version