ನೇರಂಬಳ್ಳಿ ಸುರೇಶ್ ರಾವ್, ಕುವೈತ್ ರವರಿಗೆ “ಸಮಾಜ ಸೇವಾ ರತ್ನ ಪ್ರಶಸ್ತಿ – 2026”
ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಶ್ರೀಯುತ ನೇರಂಬಳ್ಳಿ ಸುರೇಶ್ ಶ್ಯಾಮ್ ರಾವ್, ಕುವೈತ್ ರವರಿಗೆ ಕನ್ನಡ ಭವನದ ಗೌರವಾನ್ವಿತ “ಸಮಾಜ ಸೇವಾ ರತ್ನ ಪ್ರಶಸ್ತಿ – 2026” ಲಭಿಸಿದೆ.
ಗಲ್ಫ್ ರಾಷ್ಟ್ರ ಕುವೈತ್ ನಲ್ಲಿ ಕರ್ನಾಟಕ ಮೂಲದ ಹಲವಾರು ಸಂಘ-ಸಂಸ್ಥೆ ಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಗಲ್ಫ್ ಕನ್ನಡಿಗರ ಒಕ್ಕೂಟ (GKO) ಕುವೈತ್ ಉಪಾಧ್ಯಕ್ಷರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (KPCC) ಕುವೈತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಾಖಲೆಯ ಸ್ವಯಂ ರಕ್ತದಾನಕ್ಕಾಗಿ ಹಾಗೂ ಕ್ವಿಜ್ ವಿಜೇತ ನಾಗಿ ಭಾರತೀಯ ರಾಯಭಾರಿ ಕಚೇರಿ ಕುವೈತ್ ನಿಂದ ಪ್ರಸಂಶಾ ಪತ್ರಗಳು, ಕರ್ನಾಟಕ ರಾಜ್ಯ ಸರಕಾರದಿಂದ “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2020”, ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರು ಭಾಗವಹಿಸಿದ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ – 2023 ರಲ್ಲಿ ಸನ್ಮಾನ ಸ್ವೀಕಾರ, ಕನ್ನಡ ಸಂಘ ಮಸ್ಕತ್ ಹಾಗೂ KPCC ಯಿಂದ “ವಿಶ್ವಮಾನ್ಯ ಪ್ರಶಸ್ತಿ – 2025”, “ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ – 2019”, ಕನ್ನಡ ಸಂಘ ಬಹರೇನ್ ನಿಂದ ಕನ್ನಡ ಭವನ ಸ್ಮರಣಿಕೆ ಸ್ವೀಕಾರ, ದುಬೈನಲ್ಲಿ ಶ್ರೀ ಶ್ರೀ ಡಾ. ಬಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮರಣಾರ್ಥ ಅವರ ಸ್ಮಾರಕ ಪ್ರಶಸ್ತಿ ಸ್ವೀಕಾರ ಮಾಡಿದ ಇವರು ಕೋರೋನಾ ಮಹಾಮಾರಿ ಕಾಲಘಟ್ಟದಲ್ಲಿ, ಕುವೈತ್ ನಲ್ಲಿ ಭಾರತೀಯರಿಗೆ ಮಾಡಿದ ಸಹಾಯ-ಸಹಕಾರ ಪ್ರಸಂಶನೀಯ.
ಕನ್ನಡ ಭವನದ ರಜತ ಸಂಭ್ರಮ 18-01-2026 ರಂದು ಕನ್ನಡ ಭವನ ಸಂಕೀರ್ಣದ “ಶ್ರೀಕೃಷ್ಣ ದೇವರಾಯ ವೇದಿಕೆ”ಯಲ್ಲಿ ನಡೆಯುವ “ನಾಡು-ನುಡಿ ಹಬ್ಬ” ಸಮಾರಂಭದಲ್ಲಿ ನೇರಂಬಳ್ಳಿ ಸುರೇಶ್ ಶ್ಯಾಮ್ ರಾವ್, ಕುವೈತ್ ರವರಿಗೆ “ಸಮಾಜ ಸೇವಾ ರತ್ನ ಪ್ರಶಸ್ತಿ – 2026” ಪ್ರಶಸ್ತಿ (ವಿದೇಶಿ ವಿಭಾಗದ) ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ.ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
