ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಆರೋಪಿ ನಜೀಮ್ ಬಂಧನ
ಬಂಟ್ವಾಳ: ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪಟ್ಟುಲಿಕೆ ವಾಸಿಯಾಗಿರುವ ನಜೀಮ್ ಅಲಿಯಾಸ್ ನಜ್ಜು (30) ವಿರುದ್ಧ ಉಳ್ಳಾಲ, ಕೊಣಾಜೆ, ಮಂಗಳೂರು ನಾರ್ತ್, ಬೇಗೂರು (ಬೆಂಗಳೂರು ನಗರ) ಹಾಗೂ ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಜಾಮೀನು ಪಡೆದು ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ಈತನ ವಿರುದ್ಧ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಹೊರಡಿಸಲಾಗಿತ್ತು.
ವಿಶೇಷ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಮುಖ ಪ್ರಕರಣಗಳು:
2015 – ಉಳ್ಳಾಲ ಪೊಲೀಸ್ ಠಾಣೆ (ಸೆ. 143, 147, 148, 447, 448, 504, 341, 307, 506, 109 r/w 149 IPC)
2016 – ಕೊಣಾಜೆ ಪೊಲೀಸ್ ಠಾಣೆ (ಸೆ. 143, 147, 148, 341, 504, 506, 307 r/w 149 IPC)
2019 – ಭಟ್ಕಳ ಪೊಲೀಸ್ ಠಾಣೆ (302, 201 IPC)
2021 – ಕೊಣಾಜೆ ಪೊಲೀಸ್ ಠಾಣೆ (ಸೆ. 143, 147, 148, 504, 324, 323 r/w 149 IPC)
2022 – ಕೊಣಾಜೆ ಪೊಲೀಸ್ ಠಾಣೆ (ಸೆ. 447, 324, 504, 506 IPC)
2022 – ಮಂಗಳೂರು ನಾರ್ತ್ ಪೊಲೀಸ್ ಠಾಣೆ (ಸೆ. 323, 324, 397, 365, 342 r/w 34 IPC)
2022 – ಬೇಗೂರು ಪೊಲೀಸ್ ಠಾಣೆ, ಬೆಂಗಳೂರು ನಗರ (NDPS ಕಾಯ್ದೆ ಸೆ. 20(b))
2023 – ಉಳ್ಳಾಲ ಪೊಲೀಸ್ ಠಾಣೆ (NDPS ಕಾಯ್ದೆ ಸೆ. 8(c), 21, 21(c))
ಮಂಗಳೂರು ದಕ್ಷಿಣ ಉಪ ಆಯುಕ್ತರವರ ಮಾರ್ಗದರ್ಶನದಲ್ಲಿ ಕೊಣಾಜೆ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ದಿನೇಶ್, ಶರೀಫ್ ಮತ್ತು ರಮೇಶ್ ಅವರ ಶ್ರಮದಿಂದ ಆರೋಪಿಯನ್ನು ಬಂಧಿಸಲಾಗಿದೆ.