ನ. 16: ಕೊಡವೂರಿನಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ
ಉಡುಪಿ: ಹಳೆ ವಿದ್ಯಾರ್ಥಿ ಸಂಘ, ಯುವಕ ಸಂಘ (ರಿ) ಕೊಡವೂರು ಹಾಗೂ ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇವರ ವತಿಯಿಂದ ಆರಕ್ಷಕ ಠಾಣೆ ಮಲ್ಪೆ ಇವರ ಸಹಯೋಗದಲ್ಲಿ ನವೆಂಬರ್ 16 ಆದಿತ್ಯವಾರದಂದು ಸಾಯಂಕಾಲ ಗಂಟೆ 4.00ಕ್ಕೆ ಕೊಡವೂರು ಶಾಲಾ ವಠಾರದಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ ಪೂಜಾರಿ,ಮುಖ್ಯ ಅತಿಥಿಗಳಾಗಿ ಉಡುಪಿಯ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ,ಮಲ್ಪೆಯ ಪೊಲೀಸ್ ವೃತ್ತ ನೀರಿಕ್ಷಕ ರಾಮಚಂದ್ರ ನಾಯಕ್,ಮಲ್ಪೆ ಆರಕ್ಷಕ ಠಾಣೆಯ ಠಾಣಾಧಿಕಾರಿ ಅನೀಲ ಡಿ.ಕುಮಾರ್ ಭಾಗವಹಿಸಲಿದ್ದು ಅಪರಾಧ ತಡೆಯ ಕುರಿತಾಗಿ ಜಾಗೃತಿ ಮೂಡಿಸಲಿದ್ದಾರೆ.
ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿಕೊಂಡಿರುತ್ತಾರೆ
