Home Mangalorean News Kannada News ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ಹಾಗೂ ಪರಿಶೀಲನೆ

ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ಹಾಗೂ ಪರಿಶೀಲನೆ

Spread the love

ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ಹಾಗೂ ಪರಿಶೀಲನೆ

ಮಂಗಳೂರು: ಮಹಾನಗರಪಾಲಿಕೆಯ ವ್ಯಾಪ್ತಿಯ ಪಚ್ಚನಾಡಿ ಹಾಗೂ ಕುಡುಪು ಗ್ರಾಮದ ಘನತ್ಯಾಜ್ಯ ಲ್ಯಾಂಡ್ ಫಿಲ್ ಘಟಕದಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಘನತ್ಯಾಜ್ಯ ಭೂಕುಸಿತವಾಗಿರುವ ಪ್ರದೇಶಕ್ಕೆ ಹಾಗೂ ಮಂದಾರ ಪ್ರದೇಶದ ಘನತ್ಯಾಜ್ಯ ಭೂಕುಸಿತವಾಗಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿರುವ ಕುರಿತು ಮಾಹಿತಿಯನ್ನು ಪಡೆದರು.

ಸದರಿ ಪ್ರದೇಶದ ಸಂತ್ರಸ್ಥರಿಗೆ ಹಾಗಿರುವ ನಷ್ಟವನ್ನು ಮೊದಲನೆಯ ಆದ್ಯತೆಯಲ್ಲಿ ಎಲ್ಲರಿಗೆ ಪರಿಹಾರವನ್ನು ಒದಗಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು. ಇದರೊಂದಿಗೆ ಕುಸಿತವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಲು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುವುದು. ವೇಸ್ಟ್ ಟು ಎನರ್ಜಿಗೆ ಸಂಬಂಧಿಸಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಬೆಂಗಳೂರು ಇವರಿಂದ ಬಂದಿರುವ ಪ್ರಸ್ತಾವನೆಯಂತೆ ಉಡುಪಿ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಪಚ್ಚನಾಡಿ ಹಾಗೂ ಕುಡುಪು ಗ್ರಾಮದ ಘನತ್ಯಾಜ್ಯ ಲ್ಯಾಂಡ್ ಫಿಲ್ ಘಟಕದಲ್ಲಿ ಭೇಟಿ ಸಮಯದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಭರತ್ ಶೆಟ್ಟಿ, ಮಹಾನಗರಪಾಲಿಕೆಯ ಆಯುಕ್ತರಾದ ದಿನೇಶ್ ಕುಮಾರ್, ಪಚ್ಚನಾಡಿ ವಾರ್ಡಿನ ಮನಾಪಾ ಸದಸ್ಯರಾದ ಸಂಗೀತ ನಾಯಕ್ ಹಾಗೂ ಮಹಾನಗರಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು


Spread the love

Exit mobile version