Home Mangalorean News Kannada News ಪಡಿತರ ಚೀಟಿ ವಿಧ, ಆಹಾರ ಧಾನ್ಯ ವಿತರಣಾ ಪ್ರಮಾಣ

ಪಡಿತರ ಚೀಟಿ ವಿಧ, ಆಹಾರ ಧಾನ್ಯ ವಿತರಣಾ ಪ್ರಮಾಣ

Spread the love

ಪಡಿತರ ಚೀಟಿ ವಿಧ, ಆಹಾರ ಧಾನ್ಯ ವಿತರಣಾ ಪ್ರಮಾಣ

ಅಂತ್ಯೋದಯ (1ರಿಂದ 3 ಸದಸ್ಯರನ್ನು ಹೊರತುಪಡಿಸಿ 4 ಮತ್ತು 4ಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳಿಗೆ) ಪಡಿತರ ಚೀಟಿದಾರರಿಗೆ ಹಾಗೂ ಅನ್ನಭಾಗ್ಯ ಆದ್ಯತಾ ಪಡಿತರ ಚೀಟಿದಾರರಿಗೆ (ಪ್ರತಿ ಸದಸ್ಯರಿಗೆ) ಮೇ ಮತ್ತು ಜೂನ್ ತಿಂಗಳಿಗೆ 5 ಕೆಜಿ (ಒಟ್ಟು 10 ಕೆಜಿ).

2 ತಿಂಗಳ ತಲಾ ಹಂಚಿಕೆ ಜೂನ್ ತಿಂಗಳಲ್ಲಿಯೇ ಒಟ್ಟಾಗಿ ಒಂದೇ ಕಂತಿನಲ್ಲಿ ವಿತರಿಸಲಾಗುತ್ತಿದೆ. ಪಡಿತರ ಚೀಟಿದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಮೇ ಮತ್ತು ಜೂನ್ ತಿಂಗಳಿಗೆ ಪ್ರತ್ಯೇಕವಾಗಿ ಒಂದೇ ಬಾರಿ ಬಯೋ ನೀಡಿ ಪಡಿತರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಪಡಿತರ ವಿತರಣಾ ಕಾರ್ಯಕ್ಕಾಗಿ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸರ್ವರ್ ಲಭ್ಯವಿರುವುದರಿಂದ ಪಡಿತರ ಚೀಟಿದಾರರು ಬಯೋ ನೀಡಿ ಪಡಿತರ ಪಡೆಯಬಹುದು. ಎರಡು ತಿಂಗಳ ಅನ್ನಭಾಗ್ಯ ಹಂಚಿಕೆ ಪಡೆಯಲು ಜೂನ್ 30 ಕೊನೆಯ ದಿನ.
ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹ ಪಡಿತರ ಚೀಟಿಯನ್ನು ರದ್ದುಪಡಿಸಲಾಗುತ್ತದೆ. ಪಡಿತರ ವಿತರಣೆಯ ಬಗ್ಗೆ ಏನಾದರೂ ದೂರುಗಳು ಇದ್ದಲ್ಲಿ ಕೇಂದ್ರ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಬಹುದು ಅಥವಾ ಹತ್ತಿರದ ಆಹಾರ ಇಲಾಖೆಯ ಕಛೇರಿಗೆ ಭೇಟಿ ನೀಡಿ ದೂರು ನೀಡಬಹುದು. ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿದಾರರು ನ್ಯಾಯಬೆಲೆ ಅಂಗಡಿಯಲ್ಲಿ ನಿಗಧಿತ ಪ್ರಮಾಣದಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಣೆ ಮಾಡಬೇಕು. ಪಡಿತರ ಚೀಟಿದಾರರು ಆಹಾರ ಧಾನ್ಯವನ್ನು ಉಚಿತವಾಗಿ ಪಡೆಯಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆ ತಿಳಿಸಿದೆ.


Spread the love

Exit mobile version