Home Mangalorean News Kannada News ಪಣಂಬೂರು ಪೊಲೀಸರಿಂದ ದರೋಡೆ ಆರೋಪಿಗಳ ಬಂಧನ

ಪಣಂಬೂರು ಪೊಲೀಸರಿಂದ ದರೋಡೆ ಆರೋಪಿಗಳ ಬಂಧನ

Spread the love

ಪಣಂಬೂರು ಪೊಲೀಸರಿಂದ ದರೋಡೆ ಆರೋಪಿಗಳ ಬಂಧನ

ಮಂಗಳೂರು: ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯಿಂದ ರೂಮ್ ಕಡೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ಹ್ಯಾಂಡ್ ಬ್ಯಾಗ್ ಕಸಿದು ಪರಾರಿಯಾದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧೀಸಿದ್ದಾರೆ.

ಬಂಧಿತರನ್ನು ಕಸಬಾ ಬೆಂಗ್ರೆ ನಿವಾಸಿಗಳಾದ ಸರ್ಫರಾಜ್ (28) ಮತ್ತು ಸೈಯ್ಯದ್ ಅಫ್ರಿದ್ (21) ಎಂದು ಗುರುತಿಸಲಾಗಿದೆ.ಅಗೋಸ್ತ್ 6ರಂದು ರಾತ್ರಿ 8.20 ಕ್ಕೆ ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯಿಂದಾಗಿ ರೂಮ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ನಂಬರ್ ಪ್ಲೇಟ್ ಇಲ್ಲದೆ ಗ್ರೇ ಬಣ್ಣದ ಅಕ್ಟೀವಾ ಸ್ಕೂಟರ್ ನಲ್ಲಿ ಅಡ್ಡಹಾಕಿ ಕಬ್ಬಿಣದ ತಲವಾರು ಮತ್ತು ಕಬ್ಬಿಣದ ರಾಡನ್ನು ಉಪಯೋಗಿಸಿ ಅವರಲ್ಲಿದ್ದ ಮೊಬೈಲ್ ಫೋನ್ ಮತ್ತು ಹ್ಯಾಂಡ್ ಬ್ಯಾಗನ್ನು ಕಸಿದುಕೊಂಡ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು ಬಂಧಿತರಿಂದ ಸುಲಿಗೆ ಮಾಡಿದ ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಕಬ್ಬಿಣದ ತಲವಾರು ಹಾಗೂ ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 68000 ಆಗಿದ್ದು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.


Spread the love

Exit mobile version