Home Mangalorean News Kannada News ಪತ್ರಕರ್ತ ಸುಭಾಷ್ ಶಿರಿಯ ಗಡಿನಾಡ ಪ್ರಶಸ್ತಿಗೆ ಆಯ್ಕೆ 

ಪತ್ರಕರ್ತ ಸುಭಾಷ್ ಶಿರಿಯ ಗಡಿನಾಡ ಪ್ರಶಸ್ತಿಗೆ ಆಯ್ಕೆ 

Spread the love

ಪತ್ರಕರ್ತ ಸುಭಾಷ್ ಶಿರಿಯ ಗಡಿನಾಡ ಪ್ರಶಸ್ತಿಗೆ ಆಯ್ಕೆ 

ಮುಂಬಯಿ : ಮುಂಬಯಿಯ ಪತ್ರಕರ್ತ ಗಡಿನಾಡ ಕನ್ನಡಿಗ, ಸುಭಾಷ್ ಶಿರಿಯ ಅವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘ ಬೆಂಗಳೂರು, ಇದರ ಸಹಯೋಗದಲ್ಲಿ ನೀಡುತ್ತಿರುವ 2026 ನೇ ವರ್ಷದ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಶಿರಿಯದಾರಾದ ಸುಭಾಷ್ ಶಿರಿಯ ಅವರು ಕಳೆದ 26 ವರ್ಷಗಳಿಗೂ ಅಧಿಕ ಕಾಲ ಮುಂಬಯಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಮುಂಬಯಿಯ ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನಿನ ಮುಖವಾಣಿ “ಮೊಯಾ” ಪತ್ರಿಕೆಯ ಸಂಪಾದಕರೂ ಆಗಿದ್ದಾರೆ.

ಮೇ 16ರಂದು ಕಾಸರಗೋಡಿನ ಜಿಲ್ಲೆಯ ಕುಡಾಲ್ ಮೇರ್ಕಳ, ಸುಬ್ಬಯ್ಯ ಕಟ್ಟೆ, ಕಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆಯಲಿರುವ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಹಾಗೂ ಕನ್ನಡ ಸಾಂಸ್ಕೃತಿಕ ಉತ್ಸವ 2026 ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. ಬೆಳಿಗ್ಗೆ ಶೋಭಾಯಾತ್ರೆಯೊಂದಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರಾರಂಭಗೊಳ್ಳಲಿದ್ದು, ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮಾನ್ಯ ಎನ್ ಎಸ್ ಭೋಸರಾಜು ಅವರು ಉದ್ಘಾಟಿಸಲಿದ್ದು. ಶ್ರೀಮದ್ ಎಡನೀರು ಮಠ ಕಾಸರಗೋಡಿನ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ವಿಧಾನ ಸಭೆಯ ಉಪ ಸಭಾಧ್ಯಕ್ಷರಾದ ಮಾನ್ಯ ರುದ್ರಪ್ಪ ಲಮಾಣಿ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರದ ಶಾಸಕ ಎಂ ಕೆ ಎಂ ಅಶ್ರಫ್ ಅವರು ವಯಸ್ಸಲ್ಲಿದ್ದಾರೆ. ಮಾತ್ರವಲ್ಲದೆ ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಾನ್ಯ ಕೆ ವಿ ಪ್ರಭಾಕರ್, ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿಎಂ ಶಾಹಿದ್ ಅವರು ಅತಿಥಿಗಳಾಗಿ ಭಾಗವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುವರು ಮಾತ್ರವಲ್ಲದೆ ವಿವಿಧ ಸಾಧಕರನ್ನು ಗೌರವಿಸಲಿದ್ದು ಹಾಗೂ ನಾಡಿನ ಹೆಸರಾಂತ ಪತ್ರಕರ್ತರನ್ನು ಗುರುತಿಸಿ ವಿವಿಧ ದತ್ತಿನಿಧಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕರ್ನಾಟಕದ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳಿಂದ ಜಾನಪದ ವೈವಿಧ್ಯಗಳು ನಡೆಯಲಿರುವುದು.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
Inline Feedbacks
View all comments
wpDiscuz
0
0
Would love your thoughts, please comment.x
()
x
Exit mobile version