Home Mangalorean News Kannada News ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ವಿಧಿವಶ

ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ವಿಧಿವಶ

Spread the love

ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ವಿಧಿವಶ

ತುಮಕೂರು: ದೇಶದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ನರ್ಸಮ್ಮ ಎಂದೇ ಚಿರಪರಿಚಿತರಾಗಿದ್ದ ಸೂಲಗಿತ್ತಿ ನರಸಮ್ಮ ಅವರಿಂದು ವಿಧಿವಶರಾಗಿದ್ದಾರೆ.

98 ವರ್ಷದ ನರಸಮ್ಮ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ನರಸಮ್ಮ
ಕಳೆದ 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ, ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 3 ಗಂಟೆಗೆ ನರಸಮ್ಮ ಅವರು ನಿಧನ ಹೊಂದಿದ್ದಾರೆ.

ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಪಾವಗಡ ತಾಲೂಕಿನ ದಲಿತ ಕುಟುಂಬ ಹಿನ್ನೆಲೆಯಿಂದ ಬಂದ ನರಸಮ್ಮ ಆಂಜಿನಪ್ಪ ಈ ಭಾಗದಲ್ಲಿ ‘ನರ್ಸಮ್ಮ’ ಎಂದೇ ಚಿರಪರಿಚಿತ. 7 ದಶಕಗಳಿಂದ 1,500 ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ ನರಸಮ್ಮಗೆ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ಕೂಡ ಲಭಿಸಿದೆ. ಪಾವಗಡ ತಾಲೂಕಿನ ಪುಟ್ಟ ಗ್ರಾಮ ಕೃಷ್ಣಾಪುರದ ನರಸಮ್ಮ, 12ನೇ ವಯಸ್ಸಿನಲ್ಲೇ ಆಂಜಿನಪ್ಪರನ್ನು ಮದುವೆಯಾದರು. 8 ಗಂಡು, 4 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಇವರು ತನ್ನ ಬದುಕಿನದ್ದುಕ್ಕೂ ಹೆರಿಗೆ ಮಾಡಿಸುವ ಮೂಲಕ ‘ನರಸಮ್ಮ ಮಹಾತಾಯಿ’ ಎನಿಸಿದ್ದಾರೆ. ಅಕ್ಷರ ಜ್ಞಾನವಿಲ್ಲದಿದ್ದರೂ ವೈದ್ಯಕೀಯ ಕ್ಷೇತ್ರವೇ ಅಚ್ಚರಿಯಾಗುವಂತಹ ಸಾಧನೆ ಮಾಡಿರುವ ಇವರು ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿರುವ ಇವರಿಗೆ 36 ಮೊಮ್ಮಕ್ಕಳಿದ್ದಾರೆ.


Spread the love

Exit mobile version