Home Mangalorean News Kannada News ಪಬ್ ಜೀ ಸೇರಿ117 ಚೀನಾ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಭಾರತ!

ಪಬ್ ಜೀ ಸೇರಿ117 ಚೀನಾ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಭಾರತ!

Spread the love

ಪಬ್ ಜೀ ಸೇರಿ117 ಚೀನಾ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಭಾರತ!

ನವದೆಹಲಿ: ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್ಜೀ ಸೇರಿ 117 ಚೀನಾ ಅಪ್ಲಿಕೇಶನ್ ಗಳನ್ನು ಭಾರತ ಸರಕಾರ ನಿಷೇಧಿಸಿದೆ.

ಮೂರನೇ ಬಾರಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದಕ್ಷಿಣ ಕೊರಿಯಾ ಕಂಪನಿ ಅಭಿವೃದ್ಧಿ ಪಡಿಸಿದ ಪಬ್ಜಿ ನಿಷೇಧಿಸಬೇಕೆಂದು ಕೂಗು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದಿನಿಂದಲೂ ಕೇಳಿ ಬಂದಿತ್ತು.

ಮಕ್ಕಳ ಮೆದುಳಿನ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯುವ ಜನತೆ ಹಾಳಾಗುತ್ತಿದ್ದಾರೆ ಹೀಗಾಗಿ ನಿಷೇಧಿಸಬೇಕೆಂದು ಜನ ಆಗ್ರಹಿಸಿದ್ದರು.

ಗಲ್ವಾನ್ ಘರ್ಷಣೆಯ ಬಳಿಕ ಟಿಕ್ಟಾಕ್ ಸೇರಿದಂತೆ 59 ಅಪ್ಲಿಕೇಶನ್ಗಳನ್ನು ಭಾರತ ನಿಷೇಧಿಸಿತ್ತು. ಇದಾದ ಬಳಿಕ ಮತ್ತೆ 47 ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು.

ಒಟ್ಟು 250 ಚೀನಿ ಅಪ್ಲಿಕೇಶನ್ಗಳ ಮೇಲೆ ಭಾರತ ನಿಗಾ ಇಟ್ಟಿದೆ. ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಮತ್ತು ಪ್ರಜೆಗಳ ಖಾಸಗಿತನವನ್ನು ದುರುಪಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಅಪ್ಲಿಕೇಶನ್ಗಳ ಮೇಲೆ ನಿಗಾ ಇಟ್ಟಿದೆ.


Spread the love

Exit mobile version