Home Mangalorean News Kannada News ಪಲಿಮಾರು ಪರ್ಯಾಯ; ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ

ಪಲಿಮಾರು ಪರ್ಯಾಯ; ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ

Spread the love

ಪಲಿಮಾರು ಪರ್ಯಾಯ; ಬಿಗಿ ಪೋಲಿಸ್ ಬಂದೋಬಸ್ತು, ಸಂಚಾರದಲ್ಲಿ ಬದಲಾವಣೆ

ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜ. 17 ಮತ್ತು 18 ರಂದು ನಡೆಯಲಿರುವ ಪಲಿಮಾರು ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹಾಗೂ ಕೇಂದ್ರ ಮಂತ್ರಿಗಳು ಆಗಮಿಸಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲಿಸ್ ಭದ್ರತೆಯನ್ನು ಒದಗಿಸಿಲಾಗಿದೆ.

ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬಾರ್ಗಿ ಅವರು ಜಿಲ್ಲೆಯ ಹಾಗೂ ರಾಜ್ಯದ ನಾನಾ ಭಾಗಗಳಿಂದ ಒಟ್ಟು 1- ಎಸ್ಪಿ, 1-ಹೆಚ್ಚುವರಿ ಎಸ್ಪಿ,  6- ಡಿವೈಎಸ್ಪಿ, 13 ಪೊಲೀಸ್ ನಿರೀಕ್ಷಕರು 40 – ಪೊಲೀಸ್ ಉಪನಿರೀಕ್ಷಕರನ್ನು ಹಾಗೂ 1000 ಕ್ಕೂ ಮಿಕ್ಕ ಸಿಬ್ಬಂದಿಗಳು ಮತ್ತು ಗೃಹರಕ್ಷಕರನ್ನು ಬಂದೊಬಸ್ತ್ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ. ಅಲ್ಲದೇ 4-ಕೆಎಸ್ಆರ್ ಪಿ,  5-ಡಿಎಆರ್, 3-ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ,  ಹೊರಜಿಲ್ಲೆಗಳಿಂದ ನುರಿತ ಅಪರಾಧ ಪತ್ತೆ ತಂಡಗಳನ್ನು ನಿಯೋಜಿಸಲಾಗಿದೆ. ಶ್ರೀ ಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಮತ್ತು ಸರ್ವಿಸ್ ಬಸ್ ನಿಲ್ದಾಣದ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ.

ಒಟ್ಟು ನಗರದ 6 ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ದಿನದ 24 ಗಂಟೆಯೂ ಸೂಕ್ತ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.( ಅಂಬಾಗಿಲು, ಎಂಜಿಎಂ-ಇಂದ್ರಾಳಿ, ಕುಕ್ಕಿಕಟ್ಟೆ. ಬಲಾಯಿಪಾದೆ, ಅಂಬಲಪಾಡಿ, ಬನ್ನಂಜೆ).

ಸಂಚಾರದಲ್ಲಿ ಬದಲಾವಣೆ: ದಿನಾಂಕ 17/01/2018 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ 18/01/2018 ರಂದು ಬೆಳಿಗ್ಗೆ 09:00 ಗಂಟೆಯವರೆಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಈ ಕೆಳಕಂಡಂತೆ ಬದಲಾವಣೆ ಮಾಡಲಾಗಿದೆ.

ಮಂಗಳೂರು, ಬಲಾಯಿಪಾದೆ, ಅಂಬಲಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮುಖೇನ ರಾಹೆ-17 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವುದು. ಉಡುಪಿ ನಗರದ ಸರ್ವಿಸ್ ಹಾಗೂ ಸಿಟಿ ಬಸ್ಸು ನಿಲ್ದಾಣದಿಂದ ಹೊರಹೋಗುವ ಎಲ್ಲಾ ವಾಹನಗಳು ಬನ್ನಂಜೆ ಮಾರ್ಗವಾಗಿ ಕರಾವಳಿ ಜಂಕ್ಷನ್ ನಿಂದ ಮಂಗಳೂರು, ಮಲ್ಪೆ, ಮತ್ತು ಕುಂದಾಪುರ ಕಡೆಗೆ ಹೋಗುವುದು. ಕಾರ್ಕಳಕ್ಕೆ ಹೋಗಿ ಬರುವಂತಹ ಬಸ್ಸುಗಳು ಮಣಿಪಾಲದಲ್ಲಿಯೇ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದು. ಯಾವುದೇ ಕಾರಣಕ್ಕೂ ಉಡುಪಿ ನಗರದೊಳಗೆ ಪ್ರವೇಶಿಸದೇ ಇರುವುದು. ಮಲ್ಪೆ, ಸಂತೆಕಟ್ಟೆ, ಬ್ರಹ್ಮಾವರ ಮತ್ತು ಕುಂದಾಪುರ ಕಡೆಯಿಂದ ಉಡುಪಿ ನಗರಕ್ಕೆ ಬರುವ ಸರ್ವಿಸ್ ಹಾಗೂ ಸಿಟಿ ಬಸ್ಸುಗಳು ರಾಹೆ-17 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣ ಪ್ರವೇಶಿಸುವುದು. ಮಂಗಳೂರಿನಿಂದ ಮುಂಬೈ ಹೋಗುವ ಎಲ್ಲಾ ಬಸ್ಸುಗಳು ಕರಾವಳಿ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನೇರವಾಗಿ ಸಂತೆಕಟ್ಟೆ ಮಾರ್ಗವಾಗಿ ಮುಂಬೈ ಕಡೆಗೆ ತೆರಳುವುದು. ನಗರದ ಕಿನ್ನಿಮೂಲ್ಕಿ , ಜೋಡುಕಟ್ಟೆ, ಲಯನ್ ಸರ್ಕಲ್, ಕೋರ್ಟ್ ರಸ್ತೆ , ಡಯನಾ ಜಂಕ್ಷನ್ , ಕೆಎಂ ಮಾರ್ಗ, ಹನುಮಾನ್ ಸರ್ಕಲ್ , ಸಂಸ್ಕೃತ ಕಾಲೇಜ್ ಜಂಕ್ಷನ್, ಕನಕದಾಸ ರಸ್ತೆ, ಬಡಗುಪೇಟೆ ರಸ್ತೆ, ಚಿತ್ತರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆ ರಸ್ತೆ, ತೆಂಕುಪೇಟೆ, ಎಲ್.ವಿ.ಟಿ ತೆಂಕಪೇಟೆ ದೇವಸ್ಥಾನದ ರಸ್ತೆ, ಹರಿಶ್ಚಂದ್ರ ಮಾರ್ಗದಿಂದ ವಿದ್ಯೋದಯ ಶಾಲೆಯವರೆಗೆ, ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ, ಕಟ್ಟೆ ಆಚಾರ್ಯ ಮಾರ್ಗ, ಮತ್ತು ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಿದೆ. ಸ್ವಾಗತ ಗೋಪುರ, ಕಿನ್ನಿಮುಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ ಲಯನ್ ಸರ್ಕಲ್, ಡಯಾನ ಸರ್ಕಲ್, ಮಿತ್ರ ಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕಪೇಟೆ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ನಿಷೇಧಿಸಿದೆ.

ವಾಹನ ನಿಲುಗಡೆಗೆ : ಈ ಕೆಳಕಂಡ ಸ್ಥಳದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. ಸರ್ವಿಸ್ ಬಸ್ಸ್ ನಿಲ್ದಾಣದ ಬಳಿ(ಬೋರ್ಡ ಹೈಸ್ಕೂಲ್), ಎಂ.ಜಿ.ಎಂ ಕಾಲೇಜ್ ಮೈದಾನ, ಉಡುಪಿ ಪಿ.ಪಿ.ಸಿ. ಕಾಲೇಜ್ ಆವರಣ,  ಕ್ರಿಶ್ಚಿಯನ್ ಹೈಸ್ಕೂಲ್ ಆವರಣ, ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಆವರಣದ ಎಡಭಾಗ, ವಿವೇಕಾನಂದ ಸರ್ಕಾರಿ ಹಿರಿಯ ಪ್ರಾಥವಿಕ ಪಾಠ ಶಾಲೆ ಅಜ್ಜರಕಾಡು, ಸೈಂಟ್ ಸಿಸಿಲಿ ಸ್ಕೂಲ್ ಮೈದಾನ ಅಜ್ಜರಕಾಡು, ಯು.ಬಿ.ಎಂ.ಸಿ ಹಿರಿಯ ಪ್ರಾಥಮಿಕ ಶಾಲೆ ಆವರಣ,   ಜಿ.ಟಿ.ಎಸ್ ಶಾಲಾ ಮೈದಾನ  ಉಡುಪಿ, ಸರಕಾರಿ ಸಂಯುಕ್ತ ಪ್ರೌಢಶಾಲೆ ಮೈದಾನ ಅಜ್ಜರಕಾಡು (ಜಿಲ್ಲಾ ನ್ಯಾಯಾಧೀಶರ ಮನೆಯ ಮುಂಭಾಗ),  ಬಯಲು ರಂಗಮಂದಿರ ಬೀಡಿನಗುಡ್ಡೆ ಬೀಡಿನಗುಡ್ಡೆ ಮೈದಾನ, ನಾರ್ತ ಸ್ಕೂಲ್ ಆವರಣ ಕಾರ್ಪೋರೇಷನ್ ಬ್ಯಾಂಕ್ ಎದುರು, ಆದಿಉಡುಪಿ ಹೈಯರಿ ಪ್ರೈಮರಿ ಸ್ಕೂಲ್, ಆದಿಉಡುಪಿ, ಒಳಕಾಡು ಶಾಲೆ ಆವರಣ, ರಾಯಲ್ ಗಾರ್ಡನ್ ಅವರಣ, ಅನಂತೇಶ್ವರ ಆಂಗ್ಲಮಾಧ್ಯಮ ಶಾಲೆ ಆವರಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.


Spread the love

Exit mobile version