ಪಿಲಿಕುಳ: ಸೋಮವಾರ ಪ್ರವಾಸಿಗರ ವೀಕ್ಷಣೆಗೆ ಅವಕಾಶ
ಮಂಗಳೂರು: ಶಾಲಾ ಮಕ್ಕಳ ದಸರಾ ರಜೆಯ ಪ್ರಯುಕ್ತ ಅಕ್ಟೋಬರ್ 20 ರಂದು (ಸೋಮವಾರ) ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಎಲ್ಲಾ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್, ಬೊಟಾನಿಕಲ್ ಮ್ಯೂಸಿಯಂ ಮತ್ತು ಸಂಸ್ಕøತಿ ಗ್ರಾಮವು ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.