Home Mangalorean News Kannada News ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಬಿಡುಗಡೆ

ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಬಿಡುಗಡೆ

Spread the love

ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಬಿಡುಗಡೆ

ಮಂಗಳೂರು: ಲಕುಮಿ ಸಿನಿ ಕ್ರಿಯೇಶನ್ಸ್ ಹಾಗೂ ದುರ್ಗಾ ಎಂಟೆರ್‍ಟೇನ್‍ಮೆಂಟ್ ನಿರ್ಮಾಣದ ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಇಂದು ತುಳುನಾಡಿನೆಲ್ಲೆಡೆ ಬಿಡುಗಡೆಗೊಂಡಿತು. ಮಂಗಳೂರು ಹಾಗೂ ಉಡುಪಿಯಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ವಿವಿಧ ಗಣ್ಯರು ಭಾಗವಹಿಸಿದರು.

ಮಂಗಳೂರಿನ ಸುಚಿತ್ರ ಚಿತ್ರ ಮಂದಿರದಲ್ಲಿ ನಡೆದ ಸಮಾರಂಭರದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ಸತೀಶ್‍ಪಟ್ಲ,ಯುವ ಕಾಂಗ್ರೇಸ್ ಮುಖಂಡ ಮಿಥುನ್.ರೈ, ಹಿರಿಯ ಚಿತ್ರ ನಿರ್ದೇಶಕರಾದ ರಿಚರ್ಡ್ ಕ್ಯಾಸ್ಟಲಿನೋ,ಲಕುಮಿ ಸಿನಿ ಕ್ರಿಯೇಶನ್ಸ್ ಹಾಗೂ ಲೀಡ್ಸ್ ಗ್ರೂಪ್ ಮಾಲಕರಾದ ಕಿಶೋರ್ ಡಿ.ಶೆಟ್ಟಿ,ನಿರ್ಮಾಪಕ ರೋಹನ್ ಶೆಟ್ಟಿ,ನಿರ್ದೇಶಕ ಸೂರಜ್‍ಶೆಟ್ಟಿ,ಸಂಗೀತ ನಿರ್ದೇಶಕ ಕಿಶೋರ್ ಶೆಟ್ಟಿ,ನಟ ನವೀನ್ ಡಿ.ಪಡೀಲ್,ನಾಯಕ ನಟ ಪೃಥ್ವಿ ಅಂಬರ್,ನಾಯಕಿ ಸೋನಾಲ್ ಮೊಂತೆರೋ, ನಟರಾದ ವಿಸ್ಮಯ ವಿನಾಯಕ್,ಮಂಜು.ರೈ ಇನ್ನಿತರರು ಉಪಸ್ಥಿತರಿದ್ದರು. ಪಿಲಿಬೈಲ್ ಯಮುನಕ್ಕ ತುಳುಸಿನಿಮಾ ಲೋಕಕ್ಕೆ ಮತ್ತೊಂದು ಮೈಲುಗಲ್ಲಾಗಲಿ,ತುಳು ಸಿನಿಮಾ ಕ್ಷೇತ್ರ ಇನ್ನಷ್ಟು ಎತ್ತರೆತ್ತರ ಬೆಳೆಯಲಿ ಎಂದು ಗಣ್ಯರು ಶುಭ ಹಾರೈಸಿದರು.ವಿ.ಜೆ ವಿನಿತ್ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ ಕಲ್ಪನಾ ಥಿಯೇಟರ್‍ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹನುಮಾನ್ ಗ್ರೂಪ್ ಆಫ್ ಕನ್ಸರ್ನ್ ಮಾಲಕರಾದ ವಿಲಾಸ್‍ನಾಯಕ್,ಬಿಜೆಪಿ ಮುಖಂಡ ಯಶ್‍ಪಾಲ್ ಸುವರ್ಣ,ಕಾಂಗ್ರೇಸ್ ಧುರೀಣ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಚಿತ್ರತಂಡದ ಸುನಿಲ್.ಕೆ.ಆರ್ ಇನ್ನಿತರ ಸದಸ್ಯರೂ ಹಾಜರಿದ್ದರು.


Spread the love

Exit mobile version