Home Mangalorean News Kannada News ಪುತ್ತೂರು: ದೇವಸ್ಥಾನ ಜಾತ್ರೆಯಲ್ಲಿ ಗಲಾಟೆ – ಇಬ್ಬರು ವಶಕ್ಕೆ

ಪುತ್ತೂರು: ದೇವಸ್ಥಾನ ಜಾತ್ರೆಯಲ್ಲಿ ಗಲಾಟೆ – ಇಬ್ಬರು ವಶಕ್ಕೆ

Spread the love

ಪುತ್ತೂರು: ದೇವಸ್ಥಾನ ಜಾತ್ರೆಯಲ್ಲಿ ಗಲಾಟೆ – ಇಬ್ಬರು ವಶಕ್ಕೆ

ಪುತ್ತೂರು: ದೇವಸ್ಥಾನದ ಜಾತ್ರೆ ನಡೆಯುತ್ತಿದ್ದ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ದಿನಾಂಕ 20-04-2026ರಂದು ರಾತ್ರಿ ವೇಳೆ ಪುತ್ತೂರು ಪೇಟೆಯಲ್ಲಿರುವ ದೇವಸ್ಥಾನದ ಜಾತ್ರೆಯಲ್ಲಿ ಪುತ್ತೂರು ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ದೇವಸ್ಥಾನದ ಕಚೇರಿ ಬಳಿ ಜನ ಸೇರಿರುವುದನ್ನು ಗಮನಿಸಿ ಪರಿಶೀಲನೆಗಾಗಿ ತೆರಳಿದಾಗ, ಇಬ್ಬರು ವ್ಯಕ್ತಿಗಳು ಗಲಾಟೆ ನಡೆಸುತ್ತಾ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುತ್ತಿರುವುದು ಕಂಡುಬಂದಿದೆ.

ಪೊಲೀಸರು ಗಲಾಟೆ ನಿಲ್ಲಿಸುವಂತೆ ಸೂಚನೆ ನೀಡಿದರೂ, ಅವರು ಗಲಾಟೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳನ್ನು ಪುತ್ತೂರು ನರಿಮೊಗರು ನಿವಾಸಿ ಹರ್ಷ ಗೋಪಾಲ್ (29) ಹಾಗೂ ಪುತ್ತೂರು ಕಬಕ ನಿವಾಸಿ ಹರೀಶ್ (42) ಎಂದು ಗುರುತಿಸಲಾಗಿದೆ.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2026, ಕಲಂ 194(2) ಬಿಎನ್ಎಸ್ 2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


Spread the love

Exit mobile version