Home Mangalorean News Kannada News ಪುತ್ತೂರು| ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ನವೀನ್ ಚಂದ್ರ ಸೆರೆ

ಪುತ್ತೂರು| ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ನವೀನ್ ಚಂದ್ರ ಸೆರೆ

Spread the love

ಪುತ್ತೂರು| ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ನವೀನ್ ಚಂದ್ರ ಸೆರೆ

ಪುತ್ತೂರು: ತನ್ನ ತಾಯಿ ಜೊತೆಗೆ ಬಸ್ಸಿಗೆಂದು ಕಾಯುತ್ತಿದ್ದ ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಪುತ್ತೂರಿನ ನೆಹರೂನಗರ ಬಸ್ಸು ನಿಲ್ದಾಣದಲ್ಲಿ ಮಂಗಳವಾರ ನಡೆದಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಪುತ್ತೂರಿನ ಕಬಕ ನಿವಾಸಿ ನವೀನ್ ಚಂದ್ರ (49) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿ ನವೀನ್ ಚಂದ್ರನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬಾಲಕಿ ತನ್ನ ತಾಯಿಯೊಂದಿಗೆ ನಿಂತಿರುವ ಸಂದರ್ಭ ನವೀನ್ ಚಂದ್ರ ಅಸಭ್ಯ ರೀತಿಯಲ್ಲಿ ವರ್ತಿಸಿದ್ದು, ತಕ್ಷಣವೇ ಬಾಲಕಿಯ ತಾಯಿ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಪೋಕೋ ಕಾಯ್ದೆ 2012ರ ಕಲಂ 8 ಹಾಗೂ ಭಾರತೀಯ ದಂಡ ಸಂಹಿತೆ (BNS 2023) 126(2), 74, 115(2), 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Spread the love

Exit mobile version