ಪುತ್ತೂರು | ಬಿಜೆಪಿ ರಾಜ್ಯಾಧ್ಯಕ್ಷರ ನಿಂದನೆ ಆರೋಪ: ಪ್ರಕರಣ ದಾಖಲು
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಉದ್ದೇಶಿಸಿ ಅಶ್ಲೀಲ ಪದ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಆರೋಪದಲ್ಲಿ ಯುವಕನೋರ್ವನ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ನೀಡಿದ ದೂರಿನಂತೆ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ನವೀನ್ ಕೈಕಾರ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ಸೆ.15 ರಂದು ಮೊಬೈಲ್ ನಲ್ಲಿ ಫೇಸ್ ಬುಕ್ ನೋಡುತ್ತಿದ್ದ ನವೀನ್ ರೈ ಕೈಕಾರ ಎಂಬಾತ ಆತನ ಫೇಸ್ ಬುಕ್ ಪೇಜ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಉದ್ದೇಶಿಸಿ ಅಶ್ಲೀಲವಾದ ಹಾಗೂ ಅಸಂಬಂದ್ಧವಾದ ಪದಗಳನ್ನು ಬಳಸಿ ವೀಡಿಯೋ ಮಾಡಿ ಅದನ್ನು ಪೇಸ್ ಬುಕ್ ನಲ್ಲಿ ಹರಿಯ ಬಿಟ್ಟಿದ್ದಾನೆ ಎಂದು ಶಿವಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.