Home Mangalorean News Kannada News ಪುಲ್ವಾಮಾ ಉಗ್ರರ ದಾಳಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಖಂಡನೆ

ಪುಲ್ವಾಮಾ ಉಗ್ರರ ದಾಳಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಖಂಡನೆ

Spread the love

ಪುಲ್ವಾಮಾ ಉಗ್ರರ ದಾಳಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಖಂಡನೆ

ಕಾಪು: ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಉಗ್ರರು ನಡೆಸಿದ ದಾಳಿ ನಿಜಕ್ಕೂ ಖಂಡನೀಯ ಮತ್ತು ಅತೀವ ನೋವಿನ ವಿಚಾರ. ದೇಶದಿಂದ ಭಯೋತ್ಪಾದನೆ ತೊಲಗಬೇಕಾಗಿದೆ. ದೇಶ ನೆಮ್ಮದಿಯ ಉಸಿರಿನಿಂದ ಬದುಕಬೇಕಾಗಿದೆ. ನಾಚಿಕೆಯಿಲ್ಲದ, ಮಾನವೀಯತೆ ಇಲ್ಲದ ಉಗ್ರರು ನಡೆಸಿದ ದಾಳಿಯನ್ನು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಉತ್ತರ ವಲಯ ತೀವ್ರವಾಗಿ ಖಂಡಿಸುತ್ತದೆ.

ದೇಶದ ನೆಮ್ಮದಿಗೋಸ್ಕರ, ಭವ್ಯ ಭಾರತದ ನಿರ್ಮಾಣಕ್ಕೋಸ್ಕರ ತನ್ನ ಜೀವವನ್ನೇ ಪಣಕ್ಕಿಟ್ಟು, ಅದರಲ್ಲೂ ವಿಶೇಷವಾಗಿ ತನ್ನನ್ನು ಬೆಳೆಸಿದ ಕುಟುಂಬದಿಂದ ದೂರವಿದ್ದು ದೇಶದ ಗಡಿಭಾಗದಲ್ಲಿ ವೀರ ಹೋರಾಟವನ್ನು ಮಾಡುತ್ತಿರುವ ಯೋಧರ ಸಾಹಸವನ್ನು ನಿಜಕ್ಕೂ ಮೆಚ್ಚುವಂಥದ್ದು. ಸದಾ ಭಾರತದ ಮೇಲೆ ದಾಳಿ ಮಾಡುವಂತಹ ವಿರೋಧಿ ರಾಷ್ಟ್ರದ ಉಗ್ರರು, ಈ ಬಾರಿ ದೇಶದ ಇತಿಹಾಸದಲ್ಲೇ ಘನ ಘೋರ ದುರಂತ ಸೃಷ್ಟಿ ಮಾಡಿದೆ. ಇಂತಹ ಉಗ್ರರು ಸರ್ವನಾಶ ಆಗಲೇಬೇಕು ಎಂದು ಪ್ರಧಾನ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ ತಿಳಿಸಿದ್ದಾರೆ.

ಕೇಂದ್ರ ಸರಕಾರ ತುರ್ತು ಸನ್ನಿವೇಶದಲ್ಲಿ ಜನರ ವಿಶ್ವಾಸವನ್ನು ಗಳಿಸಿ , ಉಗ್ರರ ನಾಶ ಮಾಡಲು ಪಣತೊಡಬೇಕಾಗಿದೆ. ನಲವತ್ತು ಕ್ಕೂ ಅಧಿಕ ದೇಶಭಕ್ತ ಯೋಧರ ಸಾವನ್ನು ಸಂಭ್ರಮಿಸುತ್ತಿರುವ ವಿರೋಧಿ ರಾಷ್ಟ್ರದ ಕನಸನ್ನು ನೆಲಸಮ ಮಾಡಬೇಕಾಗಿದೆ. ದೇಶದಲ್ಲಿ ರಾಜಕೀಯ ನಾಯಕರಿಗೆ ನೀಡುವಂಥ ಗೌರವವನ್ನು ಯೋಧರಿಗೆ ನೀಡಬೇಕಾಗಿದೆ. ಜಾತಿ ಮತ ಭೇದವಿಲ್ಲದೆ ಪಕ್ಷಾತೀತವಾಗಿ ಇದನ್ನು ಉಗ್ರರ ದಾಳಿಯನ್ನು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಖಂಡಿಸುತ್ತದೆ ಮತ್ತು ವೀರ ಮರಣವನ್ನಪ್ಪಿದ ವೀರ ಯೋಧರಿಗೆ ಗೌರವ ಸಲ್ಲಿಸುತ್ತದೆ ಹಾಗೂ ಅವರ ಕುಟುಂಬದವರಿಗೆ ದೇವರು ಧೈರ್ಯವನ್ನು ನೀಡಲಿ ಎಂದು ಸ್ಟೀವನ್ ಕುಲಾಸೊ ಉದ್ಯಾವರ ತಿಳಿಸಿದ್ದಾರೆ.


Spread the love

Exit mobile version