Home Mangalorean News Kannada News ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ : ಜಾಗೃತರಾಗಿರಲು ಸೂಚನೆ

ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ : ಜಾಗೃತರಾಗಿರಲು ಸೂಚನೆ

Spread the love

ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ : ಜಾಗೃತರಾಗಿರಲು ಸೂಚನೆ

ಮಂಗಳೂರು: ಪೆಟ್ರೋಲಿಯಂ ಸಂಸ್ಥೆಗಳ ನೋಂದಣಿ/ ನವೀಕರಣ(ಲೈಸೆನ್ಸ್)ಗೆ ಸಂಬಂಧಿಸಿದಂತೆ, ಶಿವರಾಜ್ ಎಂಬ ಹೆಸರಿನ ವ್ಯಕ್ತಿ (ದೂ.ಸಂ :- 8150816922) ನಾನು ಕಾರ್ಮಿಕ ಇಲಾಖೆ ಇನ್ಸೆಕ್ಟರ್ ಎಂದು ಹೇಳಿಕೊಂಡು ರೂ. 11,700 ಗಳನ್ನು ಫೆÇೀನ್ ಪೇ ಮಾಡಿ ಎಂದು ಕರೆ ಮಾಡುತ್ತಿದ್ದಾನೆ. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ದ.ಕ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಹಾಗೂ ಪ್ರಮುಖವಾಗಿ ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರು ಇಂತಹ ಕರೆಗಳು ಬಂದರೆ ಪ್ರತಿಕ್ರಿಯೆ ನೀಡದಿರಿ ಹಾಗೂ ಸುಳ್ಳು ಕರೆಗಳಿಗೆ ಮೋಸ ಹೋಗದಿರಿ ಎಂದು ತಮ್ಮ ಸಂಸ್ಥೆಗಳ ವಾಟ್ಸಪ್ ಗ್ರೂಪ್ ಮೂಲಕ ಎಲ್ಲರಿಗೂ ತಿಳಿಸಬೇಕು. ಯಾವುದೇ ಆರ್ಥಿಕ ನಷ್ಟ ಉಂಟಾಗುವುದಕ್ಕೆ ಇಲಾಖೆಯನ್ನು ದೂಷಣೆ ಮಾಡಬಾರದು.

ಇಂತಹ ವ್ಯಕ್ತಿಯಿಂದ ಕರೆ ಬಂದಲ್ಲಿ ದಾಖಲೆಯೊಂದಿಗೆ ಪೆÇಲೀಸ್ ಠಾಣೆಗೆ ಘಟನೆ/ ವಿಷಯದ ಬಗ್ಗೆ ತಿಳಿಸಲು ಹಾಗೂ ಎಲ್ಲಾ ಮಾಲೀಕರಲ್ಲಿ ಈ ವಿಷಯದ ಬಗ್ಗೆ ಗಂಭೀರತೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version